ಮತ್ತೆ ರವಿಶಾಸ್ತ್ರಿ ಮೈಕ್ ಹಿಡಿಯುವಂತೆ ಮಾಡಿದ ರೋಹಿತ್ ಶರ್ಮಾ

ಶುಕ್ರವಾರ, 15 ಡಿಸೆಂಬರ್ 2017 (11:32 IST)
ಮೊಹಾಲಿ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ  ಎಂದರೆ ಅವರ ವೀಕ್ಷಕ ವಿವರಣೆಯಿಂದಲೇ ಜನಪ್ರಿಯ. ಅವರ ಕಂಚಿನ ಕಂಠವನ್ನು ಇಷ್ಟಪಡದವರು ಯಾರಿಲ್ಲ? ಅಂತಹವರು ಈಗ ಕೋಚ್ ಆದ ಕಾರಣ ಮೈಕ್ ಕೆಳಗಿಟ್ಟಿದ್ದಾರೆ.
 

ಆದರೆ ರವಿಶಾಸ್ತ್ರಿ ಮತ್ತೆ ಮೈಕ್ ಕೈಗೆತ್ತಿಕೊಳ್ಳುವಂತೆ ಮಾಡಿರುವುದು ಹಂಗಾಮಿ ನಾಯಕ ರೋಹಿತ್ ಶರ್ಮಾ. ಮೊಹಾಲಿಯಲ್ಲಿ ನಡೆದ ಲಂಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ದ್ವಿಶತಕ ಭಾರಿಸಿದ ರೋಹಿತ್ ಸಂದರ್ಶನ ನಡೆಸಲು ಸ್ವತಃ ರವಿಶಾಸ್ತ್ರಿ ರಂಗಕ್ಕಿಳಿದಿದ್ದರು.

ತಮ್ಮ ಎಂದಿನ ಶೈಲಿಯಲ್ಲೇ ಸಂದರ್ಶನ ನಡೆಸಿದ ರವಿಶಾಸ್ತ್ರಿ ಕೊನೆಗೆ ಎಂದಿನಂತೆ ‘ನಿನ್ನ ಇನಿಂಗ್ಸ್ ಅದ್ಭುತವಾಗಿತ್ತು. ನೀನೀಗ ರೋಹಿತ್ ಪೈಸಾ ವಸೂಲ್ ಶರ್ಮಾ’ ಎಂದು ಬೆನ್ನು ತಟ್ಟಿ ಸಂದರ್ಶನ ಮುಗಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ