ವಾರ್ನ್ ಎಸೆತದ ರೀತಿಯಲ್ಲೇ ಯಾಸಿರ್ ಶಾಹ್ ಮಾಂತ್ರಿಕ ಎಸೆತ

ಮಂಗಳವಾರ, 19 ಜುಲೈ 2016 (13:31 IST)
ಆಸ್ಟ್ರೇಲಿಯಾದ ಮಾಜಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅವರು ಟೆಸ್ಟ್ ಇತಿಹಾಸದಲ್ಲಿ ಶ್ರೇಷ್ಟ ಎಸೆತವನ್ನು ಬೌಲ್ ಮಾಡಿದ ಸ್ಪಿನ್ನರ್ ಎಂಬ ನಂಬಿಕೆಗೆ ಎರಡು ಮಾತಿಲ್ಲ. ಲೆಜೆಂಡರ್ ಲೆಗ್ಗಿ 1993ರ ಆಶಸ್ ಟೆಸ್ಟ್‌ನಲ್ಲಿ ಮೈಕ್ ಗ್ಯಾಟಿಂಗ್‌ಗೆ ಎಸೆದ ಸ್ಪಿನ್ ಶತಮಾನದ ಎಸೆತವೆಂದು ನೆನಪಿಸಿಕೊಳ್ಳಲಾಗುತ್ತಿದೆ.
 
ಬಲಗೈ ಆಟಗಾರನಿಗೆ ಲೆಗ್ ಸ್ಟಂಪ್ ಕಡೆ ಎಸೆದ ಚೆಂಡು ಆಫ್‌ಸ್ಟಂಪ್ ವಿಕೆಟ್ ತುದಿಗೆ ತಾಗಿ ಔಟಾದ ಘಟನೆ ಇಂದಿಗೂ ಚರ್ಚೆಯ ವಸ್ತುವಾಗಿದೆ.
 
ಇದಿಷ್ಟೇ ಅಲ್ಲದೇ ವಾರ್ನ್ ಎಡಗೈ ಆಟಗಾರ ಆಂಡ್ರಿವ್ ಸ್ಟ್ರಾಸ್ ಅವರಿಗೆ ಇನ್ನೊಂದು ಮಾಂತ್ರಿಕ ಎಸೆತವನ್ನು ತಮ್ಮ ವೃತ್ತಿಜೀವನದ ಕೊನೆಯಲ್ಲಿ ಎಸೆದಿದ್ದರು. ಇದು ಆಫ್ ಸ್ಟಂಪ್ ಆಚೆ ಬಿದ್ದ ಚೆಂಡು ಅವರ ಲೆಗ್ ಸ್ಟಂಪ್ ಉರುಳಿಸಿತ್ತು. ಪ್ರಸಕ್ತ ಪಾಕ್ ವಿರುದ್ಧ ಇಂಗ್ಲೆಂಡ್ ಸರಣಿಯಲ್ಲಿ , ಪಾಕಿಸ್ತಾನದ ಯಾಸಿರ್ ಶಾಹ್ , ವಾರ್ನ್ ಅವರು ಸ್ಟ್ರಾಸ್‌ಗೆ ಬೌಲ್ ಮಾಡಿದ ರೀತಿಯಲ್ಲೇ ಗ್ಯಾರಿ ಬಾಲನ್ಸ್‌ ಅವರಿಗೆ ಬೌಲ್ ಮಾಡಿದ್ದು ಅದೇ ರೀತಿಯ ಫಲಿತಾಂಶ ಬಂದಿತ್ತು.
 
ವಾರ್ನ್ ರೀತಿಯಲ್ಲೇ ಯಾಸಿರ್ ಆಫ್ ಸ್ಟಂಪ್ ಆಚೆಗೆ ಚೆಂಡನ್ನು ಎಸೆದಿದ್ದರು. ಆದರೆ ಬಾಲನ್ಸ್ ಆ ಚೆಂಡನ್ನು ತಡೆಯುವ ಪ್ರಯತ್ನ ಮಾಡಿರಲಿಲ್ಲ. ಏಕೆಂದರೆ ಚೆಂಡು ಸಂಪೂರ್ಣ ತಿರುವು ತೆಗೆದುಕೊಂಡು ಲೆಗ್‌ ಸ್ಟಂಪ್ಸ್‌ಗೆ ತಾಗುತ್ತದೆಂದು ಅವರು ಕನಸುಮನಸಿನಲ್ಲೂ ಎಣಿಸಿರಲಿಲ್ಲ. ಕಾಮೆಂಟೇಟರ್‌ಗಳು ಮತ್ತು ಪ್ರೇಕ್ಷಕರು ಈ ಎಸೆತದಿಂದ ಅಚ್ಚರಿಗೊಂಡಿದ್ದರು.  ವಾರ್ನ್ ಅಥವಾ ನಾಸಿರ್ ಶಾಹ್ ಇವರಿಬ್ಬರ ಪೈಕಿ ಯಾರದ್ದು ಶ್ರೇಷ್ಟ ಎಸೆತ ಎಂಬ ಚರ್ಚೆಗೂ ಇದು ಆಸ್ಪದ ಕಲ್ಪಿಸಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ