ವಿಕೆಟ್ ಕೀಪಿಂಗ್ ಬೇಸಿಕ್ ರೂಲ್ಸ್ ಮರೆತ ರಿಷಬ್ ಪಂತ್!

ಶುಕ್ರವಾರ, 8 ನವೆಂಬರ್ 2019 (09:47 IST)
ರಾಜ್ ಕೋಟ್: ಬಾಂಗ್ಲಾದೇಶ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ತಪ್ಪಾಗಿ ಡಿಆರ್ ಎಸ್ ಬಳಸಲು ಸಲಹೆ ನೀಡಿ ಟ್ರೋಲ್ ಗೊಳಗಾಗಿದ್ದ ಯುವ ವಿಕೆಟ್ ಕೀಪರ್ ರಿಷಬ್ ಪಂತ್, ದ್ವಿತೀಯ ಪಂದ್ಯದಲ್ಲೂ ವಿಕೆಟ್ ಕೀಪಿಂಗ್ ನಿಯಮ ಗಾಳಿಗೆ ತೂರಿ ಅಪಹಾಸ್ಯಕ್ಕೀಡಾಗಿದ್ದಾರೆ.


ಲಿಟನ್ ದಾಸ್ ಬ್ಯಾಟಿಂಗ್ ಮಾಡುತ್ತಿದ್ದಾಗ ಯಜುವೇಂದ್ರ ಚಾಹಲ್ ಬಾಲ್ ನ್ನು ಹೊಡೆಯಲು ವಿಫಲರಾದಾಗ ಸ್ಟಂಪ್ ಮಾಡಲು ರಿಷಬ್ ಬಾಲ್ ಕ್ಯಾಚ್ ಪಡೆದು ಬೇಲ್ಸ್ ಎಗರಿಸಿದರು. ಆದರೆ ಬಾಲ್ ಕ್ಯಾಚ್ ಪಡೆಯುವಾಗ ರಿಷಬ್ ಗ್ಲೌಸ್ ವಿಕೆಟ್ ನಿಂದ ಮುಂದುಗಡೆ ಇತ್ತು.

ಕ್ರಿಕೆಟ್ ನಿಯಮದ ಪ್ರಕಾರ ಈ ರೀತಿ ಕ್ಯಾಚ್ ಪಡೆಯುವಾಗ ವಿಕೆಟ್ ಕೀಪರ್ ನ ಗ್ಲೌಸ್ ವಿಕೆಟ್ ನಿಂದ ಮುಂದೆ ಇರುವಂತಿಲ್ಲ. ಹೀಗಾಗಿ ಅಂಪಾಯರ್ ಗಳು ಈ ಸ್ಟಂಪ್ ಔಟ್ ನ್ನು ಪುರಸ್ಕರಿಸದೇ ಲಿಟನ್ ದಾಸ್ ಗೆ ನಾಟೌಟ್ ತೀರ್ಪು ನೀಡಿದರು. ಈ ವಿಚಾರಕ್ಕೆ ಈಗ ರಿಷಬ್ ಟ್ವಿಟರ್ ನಲ್ಲಿ ಟ್ರೋಲ್ ಆಗಿದ್ದು, ಮೊದಲು ಕೀಪಿಂಗ್ ನ ಬೇಸಿಕ್ ನಿಯಮಗಳನ್ನು ಕಲಿತು ಬನ್ನಿ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಧೋನಿಯಿಂದ ಪಾಠ ಹೇಳಿಸಿಕೊಳ್ಳಿ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ