ಪಿಚ್ ಟೀಕಿಸುವವರಿಗೆ ರೋಹಿತ್ ಶರ್ಮಾ ಟಾಂಗ್ ಕೊಟ್ಟಿದ್ದು ಹೀಗೆ!

ಸೋಮವಾರ, 1 ಮಾರ್ಚ್ 2021 (10:48 IST)
ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಮೊಟೆರಾ ಪಿಚ್ ಬಗ್ಗೆ ಎಲ್ಲರೂ ಟೀಕೆ ಮಾಡುತ್ತಿದ್ದಾರೆ. ಪಿಚ್ ಟೀಕಾಕಾರರಿಗೆ ಟೀಂ ಇಂಡಿಯಾ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಸೋಷಿಯಲ್ ಮೀಡಿಯಾದಲ್ಲಿ ಟಾಂಗ್ ಕೊಟ್ಟಿದ್ದಾರೆ.


‘ಮೈದಾನದಲ್ಲಿ ಮಲಗಿಕೊಂಡಿರುವ ರಿಲ್ಯಾಕ್ಸ್ ಮೂಡ್ ನಲ್ಲಿರುವ ಫೋಟೋ ಪ್ರಕಟಿಸಿರುವ ರೋಹಿತ್ ‘ನಾಲ್ಕನೇ ಪಿಚ್ ಗೆ ಯಾವ ಥರ ಪಿಚ್ ಇರುತ್ತೋ’ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ. ರೋಹಿತ್ ರ ಈ ಪೋಸ್ಟ್ ಗೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ಏನೇ ಇದ್ದರೂ ನೀವೇ ಕಾಪಾಡಬೇಕು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ