ಆಫ್ರಿಕಾ ವಿರುದ್ಧ ಗೆಲ್ಲಲು ಸಚಿನ್ ತೆಂಡುಲ್ಕರ್ ಕೊಟ್ಟರು ಅಚ್ಚರಿಯ ಸಲಹೆ!
ಶುಕ್ರವಾರ, 5 ಜನವರಿ 2018 (05:50 IST)
ಮುಂಬೈ: ಇದುವರೆಗೆ ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ಲದ ಅಪವಾದ ತೊಡೆದು ಹಾಕುವ ಉತ್ಸಾಹದಿಂದ ಪ್ರವಾಸಗೈದಿರುವ ಟೀಂ ಇಂಡಿಯಾಗೆ ಸಚಿನ್ ತೆಂಡುಲ್ಕರ್ ಹೇಗೆ ಆಡಬೇಕೆಂದು ಸಲಹೆ ನೀಡಿದ್ದಾರೆ.
ಸ್ಪಿನ್ನರ್ ಗಳಿಗೆ ಇಲ್ಲಿನ ವೇಗದ ಪಿಚ್ ನಲ್ಲಿ ವಿಕೆಟ್ ಕೀಳುವುದು ಕಷ್ಟವಾಗಬಹುದು. ಹಾಗಾಗಿ ಅಶ್ವಿನ್ ಮತ್ತು ಜಡೇಜಾ ಶ್ರಮಪಡಬೇಕಾಗಬಹುದು. ಅವರಿಗೆ ವೇಗಿಗಳು ಪಿಚ್ ಘಾಸಿಗೊಳಿಸಿ ಸಹಾಯ ಮಾಡಬೇಕು. ಪಿಚ್ ನಲ್ಲಿ ರಫ್ ಪ್ಯಾಚ್ ಮಾಡಿ ವೇಗಿಗಳು ಅಶ್ವಿನ್-ಜಡೇಜಾಗೆ ನೆರವಾದರೆ ಅವರೂ ವಿಕೆಟ್ ಕೀಳಬಹುದು. ಇದನ್ನೇ 2010 ರ ಆಫ್ರಿಕಾ ಪ್ರವಾಸದಲ್ಲಿ ಜಹೀರ್ ಖಾನ್ ಮಾಡಿದ್ದರು. ಇದರಿಂದ ಹರ್ಭಜನ್ ಒಂದೇ ಇನಿಂಗ್ಸ್ ನಲ್ಲಿ 7 ವಿಕೆಟ್ ಕಿತ್ತಿದ್ದರು’ ಎಂದು ಸಚಿನ್ ಸಲಹೆ ನೀಡಿದ್ದಾರೆ.
ಇನ್ನು ಮೂರು ವೇಗಿಗಳಲ್ಲದೆ, ನಾಲ್ಕನೇ ವೇಗಿಯಾಗಿ ಹಾರ್ದಿಕ್ ಪಾಂಡ್ಯ ತಂಡದಲ್ಲಿರುವುದು ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಎಂದು ಸಚಿನ್ ವಿಶ್ಲೇಷಿಸಿದ್ದಾರೆ. ಸಚಿನ್ ಸಲಹೆಯನ್ನು ಟೀಂ ಇಂಡಿಯಾ ಪರಿಗಣಿಸುತ್ತಾ ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ