ಧೋನಿ ವಿರುದ್ಧ ವಾಗ್ದಾಳಿ ನಡೆಸಿದ ಸಂಜಯ್ ಮಂಜ್ರೇಕರ್

ಬುಧವಾರ, 22 ನವೆಂಬರ್ 2017 (16:43 IST)
ಮುಂಬೈ: ಧೋನಿ ನಿವೃತ್ತಿ ಬಗ್ಗೆ ಒತ್ತಡಗಳು ಕೇಳಿಬರುತ್ತಿರುವ ಬೆನ್ನಲ್ಲೇ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಕಾರ ಸಂಜಯ್ ಮಂಜ್ರೇಕರ್ ಧೋನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 

‘ಧೋನಿ ಈಗ ಮ್ಯಾಚ್ ವಿನ್ನರ್ ಅಲ್ಲ. ಒಂದು ಧೋನಿಗಿಂತ ಚೆನ್ನಾಗಿ ಆಡಬಲ್ಲ ಆಟಗಾರ ತಂಡದಿಂದ ಹೊರಗೆ ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂದಾದರೆ ಅವರನ್ನು ತಂಡಕ್ಕೆ ಸೇರಿಸುವ ಬಗ್ಗೆ ಚಿಂತನೆ ನಡೆಸುವ ಕಾಲ ಬಂದಿದೆ. ಧೋನಿ ಬಗ್ಗೆ ಆರೋಗ್ಯಕರ ಚರ್ಚೆಗಳು ನಡೆಯಲಿ. ಅಷ್ಟಕ್ಕೇ ಕೋಪ ತಾಪ ತೋರಿಸುವುದು ಬೇಡ’  ಎಂದು ಮಂಜ್ರೇಕರ್ ಮಾಧ್ಯಮವೊಂದರ ಅಂಕಣದಲ್ಲಿ ಬರೆದುಕೊಂಡಿದ್ದಾರೆ.

‘ಧೋನಿ ಈಗ ಮ್ಯಾಚ್ ವಿನ್ನರ್ ಆಗಿ ಉಳಿದಿಲ್ಲ. ಮ್ಯಾಚ್ ವಿನ್ ಮಾಡಲು ಅವರಿಗೆ ಈಗ ಬೇರೆಯವರ ಸಹಾಯ ಬೇಕು. ಅವರ ಸರಾಸರಿಯೂ ತೀರಾ ಕೆಳಗಿದೆ. ನಾನು ನೋಡಿದ ಒಂದೇ ಒಂದು ಚೇಂಜ್ ಎಂದರೆ ಮೊದಲೆಲ್ಲಾ ಒಂದು ಓವರ್ ನಲ್ಲಿ ನಾಲ್ಕು ಸಿಕ್ಸರ್ ಸಿಡಿಸುತ್ತಿದ್ದ ಧೋನಿ ಈಗ ನಾಲ್ಕು ಬಾಲ್ ಗೆ ಒಂದು ಸಿಕ್ಸರ್ ಹೊಡೀತಿದ್ದಾರೆ’ ಎಂದು ಮಂಜ್ರೇಕರ್ ಟೀಕಾ ಪ್ರಹಾರ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ