ವಿರಾಟ್ ಕೊಹ್ಲಿ ಕುಡಿಯುವ ನೀರಿನ ಬೆಲೆ ಎಷ್ಟು ಗೊತ್ತಾ?!

ಮಂಗಳವಾರ, 25 ಏಪ್ರಿಲ್ 2017 (07:33 IST)
ಮುಂಬೈ: ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್ ನ ಫಿಟ್ಟೆಸ್ಟ್ ಕ್ರಿಕೆಟರ್ ಅನ್ನುವುದರಲ್ಲಿ ಅನುಮಾನವಿಲ್ಲ. ಅವರು ಅಷ್ಟು ಫಿಟ್ ಆಗಿರಲು ಕಾರಣ ಏನು ಗೊತ್ತಾ?

 
ಅವರು ಫಾಲೋ ಮಾಡುವ ಸ್ಟ್ರಿಕ್ಟ್ ಆಹಾರ ಕ್ರಮವೇನೋ ಹೌದು. ಅದರ ಜತೆಗೆ ಅವರು ಕುಡಿಯುವ ನೀರೂ ಕೂಡಾ ಹೌದಂತೆ. ನೀರಿನಲ್ಲೇನು ವಿಶೇಷ ಎನ್ನಬೇಡಿ. ಅವರು ಕುಡಿಯುವುದು ಮಾಮೂಲು ಬಾಟಲಿ ನೀರಲ್ಲ.

ಫ್ರಾನ್ಸ್ ನಿಂದ ಸ್ಪೆಷಲ್ಲಾಗಿ ಆಮದು ಮಾಡಿಸಿಕೊಂಡ ಇವಿಯಾನ್ ಎಂಬ ಬ್ರಾಂಡ್ ನ ಬಾಟಲಿ ನೀರು. ಇದರ ಬೆಲೆಯೇ ಒಂದು ಲೀಟರ್ ಗೆ 600 ರೂ. ಇದೆಯಂತೆ! ಅಷ್ಟು ದುಬಾರಿ ಬೆಲೆಯ ಶುದ್ಧ ನೀರು ಕುಡಿಯುವುದೇ ವಿರಾಟ್ ಆರೋಗ್ಯದ ಗುಟ್ಟಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ