ನವದೆಹಲಿ: ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಆಯ್ಕೆ ಮಾಡಿದ ಪರಿಗೆ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕಿಡಿ ಕಾರಿದ್ದಾರೆ.
ಶಿಖರ್ ಧವನ್ ರನ್ನು ಕಿತ್ತು ಹಾಕಿ ಆ ಸ್ಥಾನಕ್ಕೆ ಕೆಎಲ್ ರಾಹುಲ್ ರನ್ನು ಕರೆತರಲಾಗಿದೆ. ಹಾಗೆಯೇ ಏನೂ ಕಾರಣವಿಲ್ಲದೇ ಉತ್ತಮ ಪ್ರದರ್ಶನದ ಹೊರತಾಗಿಯೂ ಇಶಾಂತ್ ಶರ್ಮಾಗೆ ಅವಕಾಶ ನೀಡಿದ್ದಕ್ಕೆ ಸೆಹ್ವಾಗ್ ಸಿಟ್ಟಿಗೆದ್ದಿದ್ದಾರೆ.
ಒಂದೇ ಪಂದ್ಯದ ಪ್ರದರ್ಶನದ ಆಧಾರದಿಂದ ಕ್ರಿಕೆಟಿಗರನ್ನು ಅಳೆಯುವುದು ಸರಿಯಲ್ಲ ಎಂದು ಧವನ್ ರನ್ನು ಕಿತ್ತು ಹಾಕಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರೆ, ಇನ್ನೊಂದೆಡೆ ಇಶಾಂತ್ ಶರ್ಮಾ ನೀಳಕಾಯದವರು ಎಂಬ ಕಾರಣಕ್ಕೆ ಅವಕಾಶ ನೀಡಿ, ಕಳೆದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಭುವನೇಶ್ವರ್ ಕುಮಾರ್ ರನ್ನು ಕಿತ್ತು ಹಾಕಿದ್ದಕ್ಕೆ ವೀರೂ ಸಿಟ್ಟಾಗಿದ್ದಾರೆ.
‘ಭುವನೇಶ್ವರ್ ಕುಮಾರ್ ಬದಲಿಗೆ ಬೇರೆ ಯಾವುದಾದರೂ ಆಟಗಾರನನ್ನು ಕಿತ್ತು ಇಶಾಂತ್ ಶರ್ಮಾಗೆ ಅವಕಾಶ ಕೊಡಬಹುದಿತ್ತು. ಅದರ ಬದಲಿಗೆ ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರನನ್ನು ಯಾಕೆ ಹೊರಗಿಟ್ಟಿರಿ? ಒಂದು ವೇಳೆ ಈ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದರೆ ಮುಂದಿನ ಪಂದ್ಯದಿಂದ ಕೊಹ್ಲಿ ಹೊರಗಿರಲು ತಯಾರಾಗಿದ್ದಾರಾ?’ ಎಂದು ಸೆಹ್ವಾಗ್ ಖಾರವಾಗಿ ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ