ಯುವರಾಜ್ ಸಿಂಗ್ ನಿವೃತ್ತಿಗೆ ಸಿದ್ಧವಾಯ್ತು ವೇದಿಕೆ?!

ಶುಕ್ರವಾರ, 24 ನವೆಂಬರ್ 2017 (09:32 IST)
ಮೊಹಾಲಿ: ಇತ್ತೀಚೆಗಷ್ಟೇ ಹಿರಿಯ ವೇಗಿ ಆಶಿಷ್ ನೆಹ್ರಾ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ನಿವೃತ್ತಿಯಾಗಿದ್ದಾರೆ. ಇದೀಗ ಅವರ ಗೆಳೆಯ ಯುವರಾಜ್ ಸಿಂಗ್ ನಿವೃತ್ತಿ ಬಗ್ಗೆ ವದಂತಿ ಜೋರಾಗಿ ಹಬ್ಬುತ್ತಿದೆ.
 

ಯುವರಾಜ್ ಸಿಂಗ್ ಕೂಡಾ ಸದ್ಯದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಲಿದ್ದಾರೆ ಎಂಬ ಸುದ್ದಿ ಬಂದಿದೆ. ಪದೇ ಪದೇ ಫಿಟ್ನೆಸ್ ಟೆಸ್ಟ್ ನಲ್ಲಿ ವಿಫಲವಾಗುತ್ತಿರುವ ಯುವಿಗೆ ನಿವೃತ್ತಿಯಾಗಲು ಬಿಸಿಸಿಐ ಸೂಚಿಸಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಇದಕ್ಕಾಗಿ ತವರು ಮೊಹಾಲಿಯಲ್ಲಿ ಯುವಿ ಕೊನೆಯ ಏಕದಿನ ಪಂದ್ಯವಾಡಲು ವೇದಿಕೆ ಸಿದ್ದವಾಗಿದೆಯಂತೆ. ಫಿಟ್ನೆಸ್ ಮರಳಿ ಪಡೆಯಲು ಈಗಾಗಲೇ ಎನ್ ಸಿಎಗೆ ಆಗಮಿಸಿರುವ ಯುವರಾಜ್ ಟೀಂ ಇಂಡಿಯಾಕ್ಕೆ ಮರಳಿ ನಿವೃತ್ತಿ ಘೋಷಿಸುತ್ತಾರಾ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ