ವಾಡೇಕರ್ ಟೀಂ ಮಾಡಿದ್ದನ್ನು ಕೊಹ್ಲಿ ಟೀಂ ಇಂಗ್ಲೆಂಡ್ ನಲ್ಲಿ ಮಾಡಲಿದೆ: ಸುನಿಲ್ ಗವಾಸ್ಕರ್

ಬುಧವಾರ, 25 ಆಗಸ್ಟ್ 2021 (10:55 IST)
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಹೊಂದಿರುವ ಟೀಂ ಇಂಡಿಯಾ ಈ ಸರಣಿ ಗೆದ್ದು ಬರಲಿದೆ ಎಂದು ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

 

1971 ರಲ್ಲಿ ಅಜಿತ್ ವಾಡೇಕರ್ ನೇತೃತ್ವದ ಟೀಂ ಇಂಡಿಯಾ ಮೊದಲ ಬಾರಿಗೆ ಇಂಗ್ಲೆಂಡ್ ನಲ್ಲಿ ಟೆಸ್ಟ್ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು.

ಅದೇ ಸಾಧನೆಯನ್ನು ಈಗ ಕೊಹ್ಲಿ ಪಡೆಯೂ ಮಾಡಲಿದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಕೊಹ್ಲಿ ಪಡೆ ಆರಂಭಿಕ ಎರಡು ಟೆಸ್ಟ್ ಪಂದ್ಯಗಳಲ್ಲಿ ಅದ್ಭುತ ಸಾಧನೆ ಮಾಡಿದೆ. ಹೀಗಾಗಿ ಸರಣಿ ಗೆದ್ದೇ ಗೆಲ್ಲುತ್ತಾರೆಂದು ಗವಾಸ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ