ಸುರೇಶ್ ರೈನಾ ಬಂಧನದ ನಿಜ ಕಾರಣ ಬಿಚ್ಚಿಟ್ಟ ಅವರ ಮ್ಯಾನೇಜರ್
ಬುಧವಾರ, 23 ಡಿಸೆಂಬರ್ 2020 (09:23 IST)
ಮುಂಬೈ: ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಪಬ್ ನಲ್ಲಿ ಪಾರ್ಟಿ ಮಾಡುತ್ತಿದ್ದ ಸುರೇಶ್ ರೈನಾರನ್ನು ಬಂಧಿಸಿದ ಬಗ್ಗೆ ಅವರ ಮ್ಯಾನೇಜಿಂಗ್ ಸಂಸ್ಥೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.
ರೈನಾ ಅಲ್ಲಿಗೆ ಜಾಹೀರಾತಿನ ಚಿತ್ರೀಕರಣವೊಂದಕ್ಕೆ ಹೋಗಿದ್ದರು. ಅವರಿಗೆ ಸ್ಥಳೀಯ ಕೋವಿಡ್ ನಿಯಮಗಳ ಬಗ್ಗೆ ಅರಿವಿರಲಿಲ್ಲ. ಹೀಗಾಗಿ ನಿಯಮ ಉಲ್ಲಂಘನೆಯಾಗಿತ್ತು. ಇದರಿಂದಾಗಿ ಇತರರೊಂದಿಗೆ ಅವರನ್ನೂ ಬಂಧಿಸಲಾಗಿತ್ತು ಎಂದು ಹೇಳಿಕೆ ಬಿಡುಗಡೆ ಮಾಡಲಾಗಿದೆ.