ಆಂಗ್ಲರ ನಾಡಿನಲ್ಲಿ ರಾಹುಲ್ ದ್ರಾವಿಡ್ ಪಾತ್ರ ಮಾಡಲು ಪೂಜಾರ-ರೆಹಾನೆ ಜೋಡಿಯೇ ಬೇಕು

ಬುಧವಾರ, 9 ಜೂನ್ 2021 (08:52 IST)
ಲಂಡನ್: ಟೆಸ್ಟ್ ಚಾಂಪಿಯನ್ ಶಿಪ್ ಮತ್ತು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲು ಆಂಗ್ಲರ ನಾಡಿಗೆ ಕಾಲಿಟ್ಟಿರುವ ಟೀಂ ಇಂಡಿಯಾಗೆ ಈಗ ರಾಹುಲ್ ದ್ರಾವಿಡ್ ಪಾತ್ರ ಮಾಡುವವರು ಬೇಕಾಗಿದ್ದಾರೆ.


ಇಲ್ಲಿನ ಪಿಚ್ ನಲ್ಲಿ ತಾಳ್ಮೆಯಿಂದ ಆಡಿ ರನ್ ಗಳಿಸುತ್ತಿದ್ದ ದ್ರಾವಿಡ್ ರೀತಿ ಪಾತ್ರ ಮಾಡಲು ಟೀಂ ಇಂಡಿಯಾಗೆ ಈಗ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯಾ ರೆಹಾನೆ ಮುಖ್ಯ.

ಇಬ್ಬರೂ ತಮ್ಮ ಟೆಸ್ಟ್ ಶೈಲಿಯ ಆಟವಾಡಿದರೆ ಮಾತ್ರ ಭಾರತದ ಬ್ಯಾಟಿಂಗ್ ಗೆ ಉಳಿಗಾಲ. ಕಳೆದ ಕೆಲವು ದಿನಗಳಿಂದ ಕ್ರಿಕೆಟ್ ಆಡದೇ ಇದ್ದ ರೋಹಿತ್ ಶರ್ಮಾ, ಶಬ್ನಂ ಗಿಲ್ ರಂತಹ ಹೊಡೆಬಡಿಯ ಆಟಗಾರರಿಗೆ ಟೆಸ್ಟ್ ಗೆ ಕುದುರಿಕೊಳ್ಳಲು ಸಮಯ ಬೇಕಾಗಬಹುದು. ಹೀಗಾಗಿ ರೆಹಾನೆ-ಪೂಜಾರ ಜೋಡಿಯ ಆಟ ಟೀಂ ಇಂಡಿಯಾಗೆ ಮಹತ್ವದ್ದಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ