ವಿರಾಟ್ ಕೊಹ್ಲಿ ಪುತ್ರಿಗೆ ಬೆದರಿಕೆ ಹಾಕಿದ ಟೆಕಿ ಅರೆಸ್ಟ್
ಸಾಮಾಜಿಕ ಜಾಲತಾಣದಲ್ಲಿ ಪುಟಾಣಿ ವಮಿಕಾ ಕೊಹ್ಲಿಗೆ ವ್ಯಕ್ತಿಯೋರ್ವ ಅತ್ಯಾಚಾರ ಬೆದರಿಕೆ ಹಾಕಿದ್ದು ಭಾರೀ ಸುದ್ದಿಯಾಗಿತ್ತು. ಈ ನೆಟ್ಟಿಗನ ಕೀಳು ಅಭಿರುಚಿಯ ಪೋಸ್ಟ್ ಬಗ್ಗೆ ಸ್ವತಃ ದೆಹಲಿ ಮಹಿಳಾ ಆಯೋಗ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿತ್ತು.
ಅದರಂತೆ ಮುಂಬೈ ಪೊಲೀಸರು ಈಗ ಹೈದರಾಬಾದ್ ಮೂಲದ 23 ವರ್ಷ ಸಾಫ್ಟ್ ವೇರ್ ಇಂಜಿನಿಯರ್ ವೃತ್ತಿಯಲ್ಲಿರುವ ವ್ಯಕ್ತಿಯನ್ನು ಬಂಧಿಸಿದ್ದಾರೆ. ರಾಮ್ನಾಗೇಶ‍್ ಶ್ರೀನಿವಾಸ್ ಅಕುಬತಿನಿ ಎಂದು ಆರೋಪಿಯನ್ನು ಗುರುತಿಸಲಾಗಿದೆ.