ಈ ಹಿರಿಯ ಟೀಂ ಇಂಡಿಯಾ ಆಟಗಾರನಿಗೆ ಇದೇ ಕೊನೆಯ ಪಂದ್ಯ

ಗುರುವಾರ, 12 ಅಕ್ಟೋಬರ್ 2017 (08:39 IST)
ನವದೆಹಲಿ: ಟೀಂ ಇಂಡಿಯಾದ ಹಿರಿಯ ವೇಗಿ ಆಶಿಷ್ ನೆಹ್ರಾ ತಮ್ಮ ವೃತ್ತಿ ಬದುಕಿಗೆ ನಿವೃತ್ತಿ ಹೇಳುವುದದು ಪಕ್ಕಾ ಆಗಿದೆ. ನ್ಯೂಜಿಲೆಂಡ್ ವಿರುದ್ಧ ನವಂಬರ್ 1 ರಂದು ನಡೆಯಲಿರುವ ಟಿ20 ಪಂದ್ಯ ನೆಹ್ರಾ ಪಾಲಿಗೆ ಫೈನಲ್ ಪಂದ್ಯವಾಗಲಿದೆ.

 
ಇದರೊಂದಿಗೆ ನೆಹ್ರಾ ತಮ್ಮ 18 ವರ್ಷಗಳ ಕ್ರಿಕೆಟ್ ಬದುಕಿಗೆ ಗುಡ್ ಬೈ ಹೇಳಲಿದ್ದಾರೆ. ಭಾರತ ತಂಡದಲ್ಲಿ ಸಚಿನ್ ತೆಂಡುಲ್ಕರ್ ಬಿಟ್ಟರೆ ಇಷ್ಟು ಸುದೀರ್ಘ ಅವಧಿಯವರೆಗೆ ಕ್ರಿಕೆಟ್ ಆಡಿದವರು ಬೇರೆ ಯಾರೂ ಇರಲಿಕ್ಕಿಲ್ಲ.

ಹಾಗಿದ್ದರೂ 18 ವರ್ಷದ ವೃತ್ತಿ ಜೀವನದಲ್ಲಿ ನೆಹ್ರಾ ತಂಡದಿಂದ ನಾನಾ ಕಾರಣಕ್ಕೆ ಹೊರಗುಳಿದಿದ್ದೇ ಹೆಚ್ಚು. 10 ವರ್ಷಗಳ ಹಿಂದೆಯೇ ಅವರು ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. ಅಪರೂಪಕ್ಕೊಮ್ಮೆ ಕಿರು ಮಾದರಿಯ ಕ್ರಿಕೆಟ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ನೆಹ್ರಾ ಇದೀಗ ನಿವೃತ್ತಿ ಬಗ್ಗೆ ನಾಯಕ ಮತ್ತು ತಂಡದ ವ್ಯವಸ್ಥಾಪಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಎರಡು ವಿಶ್ವಕಪ್ ಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಗರಿಮೆ ಅವರದ್ದು. ಅದರಲ್ಲೂ 2003 ರ ವಿಶ್ವಕಪ್ ನಲ್ಲಿ ಜಾವಗಲ್ ಶ್ರೀನಾಥ್ ಮತ್ತು ಜಹೀರ್ ಖಾನ್ ಜತೆಗೆ ಉತ್ತಮ ದಾಳಿ ಸಂಘಟಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ