ಬೆಂಗಳೂರು: ವಿರಾಟ್ ಕೊಹ್ಲಿಗೆ ಈಗ ತಂಡದಲ್ಲಿ ಎಲ್ಲವೂ ಸರಿಯಿದೆ. ಆರಂಭಿಕರು ಉತ್ತಮ ಆರಂಭ ಒದಗಿಸುತ್ತಿದ್ದಾರೆ, ಮಧ್ಯಮ ಕ್ರಮಾಂಕ ಸಿಡಿಯುತ್ತಿದೆ, ಬೌಲರ್ ಗಳು ಬೆಂಕಿ ಉಗುಳುತ್ತಿದ್ದಾರೆ. ಹೀಗಾಗಿ ಪರ್ಫೆಕ್ಟ್ 10 ಮೇಲೆ ಕೊಹ್ಲಿ ಕಣ್ಣು ನೆಟ್ಟಿದೆ.
ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಔಪಚಾರಿಕ ಪಂದ್ಯ ನಡೆಯಲಿದೆ. ಈಗಾಗಲೇ ಸರಣಿ ಗೆದ್ದಿರುವ ಕೊಹ್ಲಿ ಪಡೆ ಇದೀಗ ತನ್ನ ಸಶಕ್ತ ಬೆಂಚ್ ಪಡೆಯ ಪರೀಕ್ಷೆಗೆ ಸಿದ್ಧವಾಗಿದೆ.
ಈ ಪಂದ್ಯವನ್ನೂ ಟೀಂ ಇಂಡಿಯಾ ಗೆದ್ದರೆ ಭಾರತ ತಂಡ ಇದುವರೆಗೆ ಮಾಡದ ಸಾಧನೆಯೊಂದನ್ನು ಮಾಡಲಿದೆ. ಸತತವಾಗಿ 10 ಪಂದ್ಯ ಗೆದ್ದು ಧೋನಿ ದಾಖಲೆಯನ್ನು ಮುರಿಯಲಿರುವ ಕೊಹ್ಲಿ ಇದುವರೆಗೆ ಭಾರತ ತಂಡ ಮಾಡದ ದಾಖಲೆ ಮಾಡಲಿದೆ.
ಬೆಂಗಳೂರಿನಲ್ಲಿ ಪಂದ್ಯ ನಡೆಯುತ್ತಿರುವ ಕಾರಣ, ತವರಿನ ಪ್ರೇಕ್ಷಕರಿಗೆ ತಮ್ಮ ಹುಡುಗರಾದ ಕೆಎಲ್ ರಾಹುಲ್ ಮತ್ತು ಮನೀಶ್ ಪಾಂಡೆ ಜತೆಯಾಗಿ ಆಡುವುದನ್ನು ನೋಡುವ ಕಾತುರವಿದೆ. ಅದರ ಜತೆಗೆ ಬೆಂಗಳೂರು ಪರ ಐಪಿಎಲ್ ಆಡುವ ಕೊಹ್ಲಿಗೆ ಇದು ಎರಡನೇ ತವರಿದ್ದಂತೆ. ಹಾಗಾಗಿ ಬೆಂಗಳೂರಿನಲ್ಲಿ ಆಡುವುದು ತಂಡಕ್ಕೆ ಯಾವತ್ತೂ ವಿಶೇಷವೇ. ಆದರೆ ಎಲ್ಲದಕ್ಕೂ ಮಳೆ ಅನುವು ಮಾಡಿಕೊಡಬೇಕಷ್ಟೇ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ