ವಿದೇಶೀ ಕೋಚ್ ಆದರೂ ಓಕೆ ಎಂದರಂತೆ ವಿರಾಟ್ ಕೊಹ್ಲಿ

ಶುಕ್ರವಾರ, 30 ಜೂನ್ 2017 (13:49 IST)
ಮುಂಬೈ: ಟೀಂ ಇಂಡಿಯಾ ಕೋಚ್ ಆಯ್ಕೆ ಎನ್ನುವುದು ಬಿಸಿಸಿಐಗೆ ದೊಡ್ಡ ತಲೆನೋವಾಗಿರುವಾಗ ವಿದೇಶೀ ಕೋಚ್ ಆದರೂ ಓಕೆ ಎಂದು ಕೊಹ್ಲಿ ಹೇಳಿದ್ದಾರೆಂದು ವರದಿಯಾಗಿದೆ.

 
‘ವಿದೇಶೀ ಕೋಚ್ ಆದರೂ ಓಕೆ. ಒಟ್ಟಾರೆ ಡ್ರೆಸ್ಸಿಂಗ್ ರೂಂನಲ್ಲಿ ಆಟಗಾರರನ್ನು ಚೆನ್ನಾಗಿ ನಿಭಾಯಿಸುವಂತಹ ವ್ಯಕ್ತಿಯಾಗಿರಬೇಕು ಎನ್ನುವುದು ಕೊಹ್ಲಿ ಅಭಿಪ್ರಾಯ’ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ಇನ್ನೊಂದೆಡೆ ರವಿ ಶಾಸ್ತ್ರಿ ಹೆಸರು ಬಲವಾಗಿ ಕೇಳಿಬರುತ್ತಿದೆ. ಶಾಸ್ತ್ರಿ ಜತೆಗೆ ಕೊಹ್ಲಿಗೆ ಉತ್ತಮ ಬಾಂಧವ್ಯವಿರವ ಕಾರಣ ಅವರು ಮುಂಚೂಣಿಯಲ್ಲಿದ್ದಾರೆಂದು ಬಿಸಿಸಿಐ ಮೂಲಗಳು ಹೇಳಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ