ಧೋನಿಯೇ ಬೇಕು ಎಂದು ವಿರಾಟ್ ಕೊಹ್ಲಿ ಹಠ ಹಿಡಿಯೋದು ಯಾಕೆ ಗೊತ್ತಾ?

ಭಾನುವಾರ, 22 ಅಕ್ಟೋಬರ್ 2017 (07:23 IST)
ಮುಂಬೈ: ಟೀಂ ಇಂಡಿಯಾದಲ್ಲಿ ಎಲ್ಲರೂ ಧೋನಿ ಭವಿಷ್ಯದ ಬಗ್ಗೆ ಮಾತನಾಡುತ್ತಿದ್ದರೆ, ನಾಯಕ ವಿರಾಟ್ ಕೊಹ್ಲಿ ಮಾತ್ರ ಧೋನಿಗೆ ಅಷ್ಟೊಂದು ಪ್ರಾಮುಖ್ಯತೆ ಯಾಕೆ ಕೊಡುತ್ತಾರೆ ಗೊತ್ತಾ?

 
ಸಂದರ್ಶನವೊಂದರಲ್ಲಿ ಮಾಜಿ ನಾಯಕ ಸೌರವ್ ಗಂಗೂಲಿ ಇವರಿಬ್ಬರ ಸಾಮರಸ್ಯದ ಬಗ್ಗೆ ಮಾತನಾಡಿದ್ದಾರೆ. ‘ನಾಯಕನಾಗಿ ಎಷ್ಟೇ ಯಶಸ್ವಿಯಾಗಿದ್ದರೂ, ಕೊಹ್ಲಿಗೆ ಧೋನಿಯ  ಸಹಾಯಬೇಕೇ ಬೇಕು’ ಎಂದು ಗಂಗೂಲಿ ಹೇಳಿದ್ದಾರೆ.

ಅದಕ್ಕೆ ಮುಖ್ಯ ಕಾರಣವೆಂದರೆ ಧೋನಿ ವಿಕೆಟ್ ಹಿಂದುಗಡೆ ನಿಂತುಕೊಂಡೇ ಎಲ್ಲವನ್ನೂ ಸರಿಯಾಗಿ ತೀರ್ಮಾನಿಸುವ ಚತುರ. ಒತ್ತಡದ ಸಂದರ್ಭವನ್ನು ನಿಭಾಯಿಸಲು ಕೊಹ್ಲಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ಈ ವಯಸ್ಸಿನಲ್ಲೂ ಫಿಟ್ ನೆಸ್ ಕಾಯ್ದುಕೊಂಡಿದ್ದಾರೆ. ಹಾಗಾಗಿ ಧೋನಿಯನ್ನು ಕೊಹ್ಲಿ ಬಿಟ್ಟುಕೊಡಲಾರರು. ಅವರು ಬಹುಶಃ ಮುಂದಿನ ವಿಶ್ವಕಪ್ ವರೆಗೂ ಆಡುತ್ತಾರೆ ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ