ರವಿಚಂದ್ರನ್ ಅಶ್ವಿನ್ ರಣಜಿ ಟ್ರೋಫಿ ಆಡಲ್ಲ ಎಂದಿದ್ದು ಯಾಕೆ?

ಗುರುವಾರ, 22 ಡಿಸೆಂಬರ್ 2016 (09:44 IST)
ಚೆನ್ನೈ: ಟೀಂ ಇಂಡಿಯಾದ ಪ್ರಮುಖ ಆಟಗಾರರು ಹೀಗೇ. ಒಮ್ಮೆ ರಾಷ್ಟ್ರೀಯ ತಂಡದಲ್ಲಿ ಖಾಯಂ ಸ್ಥಾನವಾದ ಮೇಲೆ ಯಾರಿಗೂ ತಮ್ಮ ತವರು ರಾಜ್ಯದ ಪರವಾಗಿ ಆಡವ ಆಸಕ್ತಿ ಇರುವುದಿಲ್ಲ. ಹಾಗೆಯೇ ತಮಿಳುನಾಡು ಕ್ರಿಕೆಟಿಗರೂ ಗಾಯದ ನೆಪದಿಂದ ರಣಜಿ ಟ್ರೋಫಿ ತಪ್ಪಿಸಿಕೊಳ್ಳುತ್ತಿದ್ದಾರೆ.

ಮುರಳಿ ವಿಜಯ್ ಮತ್ತು ರವಿಚಂದ್ರನ್ ಅಶ್ವಿನ್ ನಾಳೆಯಿಂದ ಆರಂಭವಾಗಲಿರುವ ಕರ್ನಾಟಕದ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಆಯ್ಕೆಯಾಗಿದ್ದರು. ಆದರೆ ಮುರಳಿ ಅಂತಿಮ ಟೆಸ್ಟ್ ನಲ್ಲೇ ಭುಜದ ಗಾಯಕ್ಕೊಳಗಾಗಿದ್ದರಿಂದ, ಆಡುವುದಿಲ್ಲ ಎಂದು ತಮಿಳುನಾಡು ಕ್ರಿಕೆಟ್ ಸಂಸ್ಥೆಗೆ ತಿಳಿಸಿದ್ದರು.

ಇನ್ನು ರವಿಚಂದ್ರನ್ ಅಶ್ವಿನ್ ಕೂಡಾ ತಮಗೆ ತೊಡೆ ಸಂಧುವಿನಲ್ಲಿ ನೋವಿದೆ ಎಂದು ನೆಪ ಹೇಳಿ ರಣಜಿ ಪಂದ್ಯ ತಪ್ಪಿಸಿಕೊಳ್ಳಲಿದ್ದಾರಂತೆ. ಅಶ್ವಿನ್ ಗೂ ವಿಶ್ರಾಂತಿ ಬೇಕಿರುವುದರಿಂದ ಅವರನ್ನೂ ಆಡಲು ಒತ್ತಾಯ ಮಾಡುವುದಿಲ್ಲ ಎಂದು ತಮಿಳುನಾಡು ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಕಾಸಿ ವಿಶ್ವನಾಥನ್ ತಿಳಿಸಿದ್ದಾರೆ. ಅದೇನೇ ಇದ್ದರೂ, ಇಬ್ಬರು ಪ್ರಮುಖ ಆಟಗಾರರು ಆಡದೇ ಇರುವುದು ಕರ್ನಾಟಕಕ್ಕೆ ಲಾಭವೇ ಬಿಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ