ಧೋನಿಗೂ, ಕೊಹ್ಲಿಗೂ ಬೆಣ್ಣೆ ಸವರಿದ ಯಜುವೇಂದ್ರ ಚಾಹಲ್
‘ನಾಯಕ ಕೊಹ್ಲಿ ನನಗೆ ಗೆಳೆಯನಂತೆ ಆತ್ಮವಿಶ್ವಾಸ ತುಂಬುತ್ತಿರುತ್ತಾರೆ. ಮಹಿ ನನಗೆ ಮೆಂಟರ್ ನಂತೆ. ಸಮಸ್ಯೆ ಬಂದಾಗ ಸೂಕ್ತ ಸಲಹೆ ನೀಡುತ್ತಾರೆ. ನನ್ನ ಮೇಲೆ ವಿಶ್ವಾಸವಿಡುವ ನಾಯಕನಿಗೆ ಧನ್ಯವಾದ ಸಲ್ಲಿಸುತ್ತೇನೆ. ಅದೇ ರೀತಿ ವಿಕೆಟ್ ಹಿಂದುಗಡೆ ಇದ್ದುಕೊಂಡು ಬ್ಯಾಟ್ಸ್ ಮನ್ ನ ಯೋಜನೆಯನ್ನು ನಿಖರವಾಗಿ ನನಗೆ ತಿಳಿಸುವ ಧೋನಿಗೆ ಅಭಾರಿಯಾಗಿರುತ್ತೇನೆ’ ಎಂದು ಚಾಹಲ್ ಹೇಳಿಕೊಂಡಿದ್ದಾರೆ.