ಅನಿಲ್ ಕುಂಬ್ಳೆ, ಭಜಿ ಈ ಪಿಚ್ ನಲ್ಲಿ ಆಡಿದ್ದರೆ 1000 ವಿಕೆಟ್ ಪಡೆಯುತ್ತಿದ್ದರು: ಯುವರಾಜ್ ಸಿಂಗ್
ಶುಕ್ರವಾರ, 26 ಫೆಬ್ರವರಿ 2021 (10:01 IST)
ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಎರಡೇ ದಿನಕ್ಕೆ ಮುಗಿದಿರುವುದು ಹಲವರಿಗೆ ಇಲ್ಲಿನ ಪಿಚ್ ಬಗ್ಗೆ ಅಸಮಾಧಾನ ಉಂಟು ಮಾಡಿದೆ.
ಕೇವಲ ಎರಡೇ ದಿನಕ್ಕೆ 30 ವಿಕೆಟ್ ಉರುಳುತ್ತದೆಂದರೆ ಈ ಪಿಚ್ ಟೆಸ್ಟ್ ಪಂದ್ಯವಾಡಲು ಯೋಗ್ಯವಲ್ಲ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ಹರ್ಭಜನ್ ಸಿಂಗ್, ಅನಿಲ್ ಕುಂಬ್ಳೆ ಈ ಪಿಚ್ ನಲ್ಲಿ ಬೌಲಿಂಗ್ ಮಾಡುತ್ತಿದ್ದರೆ 800, 1000 ವಿಕೆಟ್ ಕಬಳಿಸುತ್ತಿದ್ದರು ಎಂದು ಯುವಿ ವ್ಯಂಗ್ಯ ಮಾಡಿದ್ದಾರೆ.