ಅಮೆಜಾನ್ ಅರಣ್ಯನಾಶ ತಡೆಯಲು ಸೈನ್ಯ ಕಳುಹಿಸಲು ಮುಂದಾದ ಬ್ರೆಜಿಲ್

ಮಂಗಳವಾರ, 29 ಜೂನ್ 2021 (13:01 IST)
ಬ್ರೆಜಿಲ್ :ಜಗತ್ತಿನ ಆಕ್ಸಿಜನ್ ತೊಟ್ಟಿಲು ಎಂದು ಕರೆಯಲ್ಪಡುವ ದಕ್ಷಿಣ ಅಮೆರಿಕಾದ ಅಮೆಜಾನ್ ಕಾಡುಗಳು ಒತ್ತುವರಿಯಾಗುತ್ತಿವೆ, ನಾಶವಾಗುತ್ತಿವೆ ಎಂಬ ಕೂಗು ಕಳೆದ ಹಲವಾರು ವರ್ಷಗಳಿಂದ ಕೇಳಿಬರುತ್ತಿದೆ. 



















ಅಮೆಜಾನ್ ಉಳಿಸಿ ಅಭಿಯಾನ ಕೂಡ ನಡೆಯುತ್ತಿದೆ. ವಿವಿಧ ಪರಿಸರ ಸಂಘಟನೆಗಳು ಅಮೆಜಾನ್ ಉಳಿಸುವ ಹೋರಾಟದಲ್ಲಿ ತೊಡಗಿಸಿಕೊಂಡಿವೆ. ಬ್ರೆಜಿಲ್ ಸರ್ಕಾರ ಮಾತ್ರ ಅಮೆಜಾನ್ ಉಳಿಸಲು ಇದುವರೆಗೆ ಹೆಚ್ಚಿನ ಪ್ರಯತ್ನ ಮಾಡಿರಲಿಲ್ಲ. ಬದಲಾಗಿ 2018 ರ ತಮ್ಮ ಚುನಾವಣಾ ಪ್ರಚಾರದಲ್ಲಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸಾನೇರೋ ಅಮೆಜಾನ್ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದ್ದರು.
ಅಮೆರಿಕಾ ಮೂಲದ ಜಾಗತಿಕ ಕಂಪನಿಗಳು ಅಮೆಜಾನ್ ಅರಣ್ಯ ವಲಯದಲ್ಲಿ ಫಾರ್ಮಿಂಗ್, ಕೃಷಿ ಸೇರಿದಂತೆ ವಿವಿಧ ರೀತಿಯ ಉದ್ಯಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವು. ಬ್ರೆಜಿಲ್ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳಿಗೆ ನೆರವಾಗುವಂತಹ ಕಾನೂನುಗಳನ್ನು ಜಾರಿಗೆ ತಂದಿತ್ತು.
ಜೊತೆಗೆ ಸ್ಥಳೀಯ ನಿವಾಸಿಗಳು ಕೂಡ ಕಾಡಿಗೆ ಬೆಂಕಿ ಹಚ್ಚಿ ತಮ್ಮ ಕೃಷಿ ಜಮೀನನ್ನು ವಿಸ್ತರಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಇದೆಲ್ಲದರಿಂದ ಜಗತ್ತಿನ ಹಸಿರು ತೊಟ್ಟಿಲು ಅಮೆಜಾನ್ ಕಾಡಿಗೆ ಧಕ್ಕೆಯಾಗಿದೆ. ಈಗ ಬ್ರೆಜಿಲ್ ಸರ್ಕಾರ ಎಚ್ಚೆತ್ತುಕೊಂಡು ಅಮೆಜಾನ್ ಕಾಡುಗಳನ್ನು ಉಳಿಸುವ ಪ್ರಯತ್ನಕ್ಕೆ ಮುಂದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ