ಬೆಂಗಳೂರು : ಪ್ರತಿ ವರ್ಷ ಶ್ರಾವಣ ಮಾಸದ ಮೊದಲ ಶುಕ್ರವಾರ ಬರುವ ಹಬ್ಬವೇ ವರಮಹಾಲಕ್ಷ್ಮೀ ವ್ರತ. ಈ ವ್ರತವನ್ನು ಮಾಡುವ ಮಹಿಳೆಯು ಈ ಬಣ್ಣದ ಸೀರೆಗಳನ್ನು ಉಟ್ಟರೆ ಲಕ್ಷ್ಮೀದೇವಿಯ ಕೃಪೆಗೆ ಪಾತ್ರರಾಗುತ್ತೀರಿ.
ಮನೆಯ ಅಭಿವೃದ್ಧಿಯಾಗಲು, ಪತಿಯ ಆಯಸ್ಸು ಹೆಚ್ಚಾಗಲು ಮಹಿಳೆಯರು ಈ ವ್ರತವನ್ನು ಮಾಡುತ್ತಾರೆ. ಆಗ ಸರಿಯಾದ ನಿಯಮವನ್ನು ಪಾಲಿಸಿದರೆ ಅವರಿಗೆ ಲಕ್ಷ್ಮೀದೇವಿಯ ಅನುಗ್ರಹ ದೊರೆಯುತ್ತದೆ. ಅಂದು ಮಹಿಳೆಯರು ಗುಲಾಬಿ ಬಣ್ಣದ ಸೀರೆಗಳನ್ನು ಉಟ್ಟು ಪೂಜೆ ಮಾಡಿದ್ದಾರೆ ಲಕ್ಷ್ಮೀದೇವಿ ಪ್ರಸನ್ನಳಾಗುತ್ತಾಳೆ ಎಂದು ಪಂಡಿತರು ಹೇಳುತ್ತಾರೆ.