ದೀಪಾವಳಿ ಮರುದಿನ ಕೆಲವರು ಬಾಡೂಟ ಮಾಡುವ ಸಂಪ್ರದಾಯವಿರುತ್ತದೆ. ಬಾಡೂಟ ಸೇವನೆ ಮಾಡಿದ ಬಳಿಕ ನಿಮ್ಮ ಡಯಟ್ ಹೇಗಿರಬೇಕು ಇಲ್ಲಿದೆ ನೋಡಿ ಟಿಪ್ಸ್.
ಯಾವುದಾದರೂ ಮದುವೆ, ಪಾರ್ಟಿ ಏನಾದರೂ ಇದ್ದರೆ ಹೊಟ್ಟೆ ತುಂಬಾ ನಾನ್ ವೆಜ್ ಊಟ ಸವಿಯುತ್ತೇವೆ. ಆದರೆ ಇದಾದ ಬಳಿಕ ಕೆಲವರಿಗೆ ತೂಕ ಹೆಚ್ಚಳದ ಚಿಂತೆಯಾದರೆ ಮತ್ತೆ ಕೆಲವರಿಗೆ ಆರೋಗ್ಯದ ಚಿಂತೆ.
ಬಾಡೂಟ ಸೇವನೆ ಬಳಿಕ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರೆ ನಂತರ ಹದವಾದ ಆಹಾರ ಸೇವನೆ ಮಾಡಬೇಕು. ಉದಾಹರಣೆಗೆ ಮಧ್ಯಾಹ್ನ ಬಾಡೂಟ ಸೇವನೆ ಮಾಡಿದ್ದರೆ ಸಂಜೆ ಹೊಟ್ಟೆ ಖಾಲಿ ಬಿಡಿ. ರಾತ್ರಿಗೆ ಒಂದು ಲೋಟ ನಿಂಬೆ ಜ್ಯೂಸ್ ಅಥವಾ ತರಕಾರಿ ಸಲಾಡ್ ತಿನ್ನಿ.
ಮಾಂಸದ ಊಟ ಕರಗಲು ಹೆಚ್ಚು ಸಮಯ ಬೇಕು. ಹೀಗಾಗಿ ಈ ಆಹಾರ ಕರಗುವ ಮೊದಲೇ ಮತ್ತಷ್ಟು ಗಟ್ಟಿಯಾದ ಆಹಾರ ಸೇವನೆ ಮಾಡುವುದರಿಂದ ತೂಕ ಹೆಚ್ಚುವ ಅಥವಾ ಜೀರ್ಣದ ಸಮಸ್ಯೆಯಾಗಬಹುದು. ನಿಂಬೆ ಹಣ್ಣಿನ ಜ್ಯೂಸ್ ಸೇವನೆ ಜೀರ್ಣಕ್ರಿಯೆಗೆ ಸಹಕಾರಿ. ಇಲ್ಲವೇ ವಿಟಮಿನ್ ಸಿ ಅಂಶವಿರುವ ಜ್ಯೂಸ್ ಹಾಗೂ ತರಕಾರಿಗಳ ಸಲಾಡ್ ಸೇವಿಸಿ. ಇದರಿಂದ ಜೀರ್ಣ ಕ್ರಿಯೆ ಸುಗಮವಾಗುತ್ತದೆ.