ಡಾ ಬಿಎಂ ಹೆಗ್ಡೆ ಪ್ರಕಾರ ವಾಕಿಂಗ್ ಮಾಡಲು ಬೆಸ್ಟ್ ಟೈಂ ಯಾವುದು

Krishnaveni K

ಸೋಮವಾರ, 13 ಅಕ್ಟೋಬರ್ 2025 (08:47 IST)
ಕೆಲವರು ತೂಕ ಇಳಿಕೆಗಾಗಿ, ಆರೋಗ್ಯಕ್ಕಾಗಿ ವ್ಯಾಯಾಮ ಮಾಡುತ್ತಾರೆ. ಆದರೆ ವ್ಯಾಯಾಮ ಮಾಡಲು ಅಥವಾ ವಾಕಿಂಗ್ ಮಾಡಲು ಬೆಸ್ಟ್ ಟೈಂ ಯಾವುದು ಎಂದು ಖ್ಯಾತ ವೈದ್ಯ ಡಾ ಬಿಎಂ ಹೆಗ್ಡೆ ಸಂವಾದವೊಂದರಲ್ಲಿ ಹೀಗೆ ಹೇಳಿದ್ದರು.

ಕೆಲವರು ಜಾಗಿಂಗ್ ಮಾಡುವುದನ್ನೇ ಆರೋಗ್ಯಕರ ಅಭ್ಯಾಸ ಎಂದುಕೊಳ್ಳುತ್ತಾರೆ. ಆದರೆ ಎರಡು ಕಾಲಿನ ಜೀವಿಗಳಾದ ಮನುಷ್ಯರು ಜಾಗಿಂಗ್ ಮಾಡುವುದು ಉತ್ತಮವಲ್ಲ. ನಮ್ಮ ಕೀಲುಗಳು ಜಾಗಿಂಗ್ ಗೆ ಸೂಕ್ತವಲ್ಲ ಎಂದು ಅವರು ಅಭಿಪ್ರಾಯ ಪಡುತ್ತಾರೆ.

ಜಾಗಿಂಗ್ ಮಾಡುವುದು ಕೀಲುಗಳಿಗೆ ಮಾತ್ರವಲ್ಲ. ಇದು ಹೃದಯದ ಆರೋಗ್ಯಕ್ಕೂ ಒಳ್ಳೆಯದಲ್ಲ. ನಾಲ್ಕು ಕಾಲಿನ ಪ್ರಾಣಿಗಳು ಮಾತ್ರ ಓಡುತ್ತವೆ. ನಾವು ವ್ಯಾಯಾಮಕ್ಕಾಗಿ ಓಡಬೇಕಾಗಿಲ್ಲ ಎನ್ನುವುದು ಅವರ ಅಭಿಪ್ರಾಯವಾಗಿದೆ.

ಇನ್ನು, ವಾಕಿಂಗ್ ಅಥವಾ ದೈಹಿಕ ವ್ಯಾಯಾಮ ಮಾಡಲು ಉತ್ತಮ ಸಮಯ ಯಾವುದು ಎಂಬುದಕ್ಕೆ ಅವರು ಉತ್ತರಿಸಿದ್ದಾರೆ. ಕೆಲವರಿಗೆ ಊಟದ ನಂತರ ವ್ಯಾಯಾಮ ಮಾಡುವ ಅಭ್ಯಾಸವಿರುತ್ತದೆ. ಆದರೆ ಡಾ ಬಿಎಂ ಹೆಗ್ಡೆ ಪ್ರಕಾರ ಖಾಲಿ ಹೊಟ್ಟೆಯಲ್ಲಿದ್ದಾಗ ವ್ಯಾಯಾಮ ಮಾಡಲು ಬೆಸ್ಟ್ ಟೈಂ. ಯಾವುದೇ ದೈಹಿಕ ಕಸರತ್ತುಗಳನ್ನಾಗಲೀ, ವಾಕಿಂಗ್ ಆಗಲೀ ಊಟಕ್ಕೆ ಮೊದಲು ಮಾಡಬೇಕು. ವಾಕಿಂಗ್ ಮಾಡಿದ ಬಳಿಕ 10 ನಿಮಿಷ ರಿಲ್ಯಾಕ್ಸ್ ಮಾಡಿ. ಬಳಿಕ ಊಟ ಮಾಡಿ. ಇದು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ