ಕಾಯಿಲೆ ವಾಸಿಯಾಗುತ್ತದೆಯೆಂದು ಮಹಿಳೆಯನ್ನ ವರ್ಷಗಟ್ಟಲೇ ದೈಹಿಕ ಸಂಪರ್ಕ ಬೆಳೆಸಿದ ಡಾಕ್ಟರ್
ಭಾನುವಾರ, 23 ಏಪ್ರಿಲ್ 2017 (15:56 IST)
ಮಲ್ಟಿಪಲ್ ಸಿರೋಸಿಸ್ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯನ್ನ ನನ್ನ ಜೊತೆ ಸೆಕ್ಸ್ ಮಾಡಿದರೆ ಕಾಯಿಲೆ ವಾಸಿಯಾಗುತ್ತದೆಯೆಂದು ಪುಸಲಾಯಿಸಿ ವರ್ಷಗಟ್ಟಲೆ ದೈಹಿಕ ಸಂಪರ್ಕ ಬೆಳೆಸಿ ಕೈಕೊಟ್ಟಿರುವ ಘಟನೆ ಬ್ರಿಟನ್ನಿನ ಸರ್ರೆಯ್ ಪ್ರದೇಶದಲ್ಲಿ ನಡೆದಿದೆ.
ಸರ್ರೆಯ್`ನ ಕ್ವಾಮೆ ಸೊಮುಹ್ ಬೋಟೆಂಗ್ ಎಂಬಾತ ನನ್ನ ಮಾತನ್ನ ಕೇಳು, ನಾನು ವೈದ್ಯ, ಸೆಕ್ಸ್ ನಡೆಸುವುದೇ ಈ ರೋಗಕ್ಕೆ ಅತ್ಯುತ್ತಮ ಔಷಧ. ಸೆಕ್ಸ್`ನಿಂದ ನಿನ್ನ ಮರಗಟ್ಟಿದ ಕಾಲುಗಳಿಗೆ ಚೈತನ್ಯ ಬರುತ್ತದೆ ಎಂದು ನಂಬಿಸಿ ಸಂಭೋಗ ನಡೆಸಿದ್ದಾನೆ. ಇದೇರೀತಿ ಹಲವು ವರ್ಷಗಳ ಕಾಲ ನಡೆದಿದೆ. ಬಳಿಕ ನಿನ್ನನ್ನ ತಾನೇ ಮದುವೆಯಾಗುತ್ತೇನೆಂದು ಮತಾಂತರ ಸಹ ಮಾಡಿಸಿದ್ದಾನೆ. ವೈದನ ಕಾಮದಾಟದಲ್ಲಿ ಯುವತಿ ಗರ್ಭಿಣಿಯಾದಾಗ ತನಗೆ ಆಗಲೆ ಮದುವೆಯಾಗಿ ಇಬ್ಬರು ಮಕ್ಕಳಿರುವ ವಿಷಯ ಬಿಚ್ಚಿಟ್ಟಿದ್ದಾನೆ.
ವೈದ್ಯನ ಮೋಸ ಗೊತ್ತಾಗಿ ಯುವತಿ ಬೇರೆ ವೈದ್ಯರ ಬಳಿ ವಿಚಾರಿಸಿದಾಗ ಈ ರೋಗಕ್ಕೆ ಸೆಕ್ಸ್ ಮದ್ದೆಂಬ ವಿಷಯವೂ ಸುಳ್ಳೆಂಬುದು ಗೊತ್ತಾಗಿದೆ. ರೋಗದ ಬಗ್ಗೆ ಯಾರ ಬಳಿಯೂ ಹೇಳದಂತೆ, ಇಂಟರ್ನೆಟ್`ನಲ್ಲೂ ಮಾಹಿತಿ ನೋಡದಂತೆ ಆತ ತನಗೆ ಹೇಳಿದ್ದು ಯಾಕೆ ಎಂಬುದು ಇದೀಗ ಯುವತಿಯ ಅರಿವಿಗೆ ಬಂದಿದೆ.
ಇದೀಗ, ರೋಗಿಗೆ ಸುಳ್ಳು ಮಾಹಿತಿ ಕೊಟ್ಟು ಲೈಂಗಿಕವಾಗಿ ಬಳಸಿಕೊಂಡ ಆರೋಪದಡಿ ವೈದ್ಯ ಕ್ವಾಮೆ ಸೊಮುಹ್ ಬೋಟೆಂಗ್ ವಿರುದ್ಧ ಮೆಡಿಕಲ್ ಟ್ರಿಬ್ಯೂನಲ್`ನಲ್ಲಿ ಕೇಸ್ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.