Dog viral video:ಮಗುವಿನ ಜೊತೆ ಮಗುವಿನಂತೆ ಆಡುತ್ತಿರುವ ಈ ಕ್ಯೂಟ್ ನಾಯಿ ವಿಡಿಯೋ ನೋಡಿ
ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಹಲವು ವಿಡಿಯೋಗಳು ನಮ್ಮ ಗಮನ ಸೆಳೆಯುತ್ತವೆ. ಅದರಲ್ಲೂ ಕೆಲವೊಂದು ನಮ್ಮ ಟೆನ್ಷನ್ ದೂರ ಮಾಡುತ್ತವೆ. ಅಂತಹದ್ದೇ ಒಂದು ಕ್ಯೂಟ್ ವಿಡಿಯೋ ಇದಾಗಿದೆ.
ಮಕ್ಕಳ ಜೊತೆ ದೊಡ್ಡವರು ಕಣ್ಣಾಮುಚ್ಚಾಲೆ ಆಡುವುದು ಸಹಜ. ಈ ಕ್ಯೂಟ್ ನಾಯಿ ಮನುಷ್ಯರನ್ನೂ ಮೀರಿಸುವಂತೆ ಮಗುವಿನ ಜೊತೆ ಕಣ್ಣಾಮುಚ್ಚಾಲೆ ಆಡಿ ಸಂತೋಷ ನೀಡುತ್ತಿದೆ. ಮನೆಯೊಳಗೇ ಒಮ್ಮೆ ಮಗುವಿನ ಜೊತೆ ಆಟವಾಡುತ್ತದೆ.
ನಾಯಿ ಮರಿಯ ತುಂಟಾಟಕ್ಕೆ ಮಗುವಿಗೆ ನಗು ತಡೆಯಲಾಗುವುದಿಲ್ಲ. ಮಗು ನಾಯಿಯನ್ನು ಒಂದು ಕಡೆ ಹುಡುಕಾಡುತ್ತಿರುವಾಗ ಇನ್ನೊಂದು ಕಡೆಯಿಂದ ಬಂದು ನಾಯಿ ಬೊಗಳಿ ಗಮನಸೆಳೆಯುತ್ತದೆ. ಈ ಕ್ಯೂಟ್ ವಿಡಿಯೋ ನಿಮಗೂ ಇಷ್ಟವಾಗಬಹುದು. ಇಲ್ಲಿದೆ ನೋಡಿ.