ಜಾಕಿರ್ ನಾಯಕ್ ಗೆ ಏಡ್ಸ್ ಮಹಾಮಾರಿ ಬಂದಿದ್ಯಾ: ಇಸ್ಲಾಮಿಕ್ ಧರ್ಮ ಪ್ರಚಾರಕ ಹೇಳಿದ್ದೇನು

Krishnaveni K

ಬುಧವಾರ, 10 ಸೆಪ್ಟಂಬರ್ 2025 (10:53 IST)
ನವದೆಹಲಿ: ಇಸ್ಲಾಮಿಕ ಧರ್ಮ ಪ್ರಚಾರಕ ಜಾಕಿರ್ ನಾಯಕ್ ಗೆ ಏಡ್ಸ್ ಮಹಾಮಾರಿ ಬಂದಿದೆಯಾ? ಹೀಗೊಂದು ಸುದ್ದಿ ಹರಿದಾಡುತ್ತಿದ್ದು ಇದಕ್ಕೆ ಸ್ವತಃ ಜಾಕಿರ್ ನಾಯಕ್ ಸ್ಪಷ್ಟನೆ ನೀಡಿದ್ದಾನೆ.

ಜಾಕಿರ್ ನಾಯಕ್ ಗೆ ಏಡ್ಸ್ ಮಹಾಮಾರಿ ಬಂದಿದೆ. ಹೀಗಾಗಿ ಆತ ಆಸ್ಪತ್ರೆಯೊಂದಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಕಳೆದ ಎರಡು ಮೂರು ದಿನಗಳಿಂದ ಸುದ್ದಿಯೊಂದು ಹರಿದಾಡುತ್ತಿದೆ.

ಇದೀಗ ಜಾಕಿರ್ ನಾಯಕ್ ತನ್ನ ಬಗ್ಗೆ ಬಂದ ಸುದ್ದಿಗಳ ಬಗ್ಗೆ ಕಾಮೆಂಟ್ ಮಾಡಿದ್ದು ಇದೆಲ್ಲಾ ಶುದ್ಧ ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾನೆ. ಯಾರೋ ನನ್ನ ಬಗ್ಗೆ ಇಲ್ಲಸಲ್ಲದ ಸುದ್ದಿ ಹರಡುತ್ತಿದ್ದಾರೆ ಎಂದು ವಿವಾದಾತ್ಮಕ ಪ್ರಚಾರಕ ಹೇಳಿದ್ದಾನೆ.

ಸುಳ್ಳು ಸುದ್ದಿ ಹರಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಜಾಕಿರ್ ನಾಯಕ್ ಚಿಂತನೆ ನಡೆಸಿದ್ದಾನಂತೆ. ಇದೆಲ್ಲವೂ ಆತನ ಇಮೇಜ್ ಹಾಳು ಮಾಡುವ ಉದ್ದೇಶದಿಂದ ಹರಡುತ್ತಿರುವ ಸುಳ್ಳು ಸುದ್ದಿಗಳು ಎಂದು ಆತನ ಪರ ವಕೀಲರೂ ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ