ಫೆಬ್ರವರಿ 28 ಕ್ಕೆ ಬ್ಯಾಂಕ್ ವ್ಯವಹಾರ ಇಟ್ಟುಕೊಳ್ಳಬೇಡಿ

ಭಾನುವಾರ, 26 ಫೆಬ್ರವರಿ 2017 (17:39 IST)
ನವದೆಹಲಿ: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶದ ಪ್ರಮುಖ ಬ್ಯಾಂಕ್ ಗಳು ಫೆಬ್ರವರಿ 28 ರಂದು ಮುಷ್ಕರ ನಡೆಸಲಿವೆ. ಹೀಗಾಗಿ ಆ ದಿನ ಬ್ಯಾಂಕ್ ವ್ಯವಹಾರ ನಡೆಸುವ ಯೋಜನೆ ಹೊಂದಿದ್ದರೆ ಮೊದಲೇ ಮುಗಿಸಿಕೊಳ್ಳಿ.


ಯೂನಿಯನ್ ಫಾರಂ ಆಫ್ ಬ್ಯಾಂಕ್ ಯೂನಿಯನ್ಸ್ ಮುಷ್ಕರಕ್ಕೆ ಕರೆ ಕೊಟ್ಟಿರುವ ಹಿನ್ನಲೆಯಲ್ಲಿ ಗ್ರಾಹಕರಿಗೆ ಮೊದಲೇ ಬ್ಯಾಂಕ್ ವ್ಯವಹಾರಗಳನ್ನು ಪೂರ್ತಿ ಮಾಡಲು ಸೂಚಿಸಲಾಗಿದೆ. ಎಸ್ ಬಿಐ, ಪಿಎನ್ ಬಿ, ಬಿಒಬಿ ಸೇರಿದಂತೆ ಪ್ರಮುಖ ಬ್ಯಾಂಕ್ ಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ.

ಆದರೆ ಐಸಿಸಿಐ, ಆಕ್ಸಿಸ್, ಎಚ್ ಡಿಎಫ್ ಸಿ ಬ್ಯಾಂಕ್ ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಪ್ರಸಕ್ತ ಕಾರ್ಮಿಕ ನೀತಿಯನ್ನು ವಿರೋಧಿಸಿ ಮುಷ್ಕರ ನಡೆಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ