ಹೆಬ್ಬಾಳ ಮೇಲ್ಸೇತುವೆಯಲ್ಲಿ ಸಂಚರಿಸುವವರ ಗಮನಕ್ಕೆ: ಶನಿವಾರದವರೆಗೂ ರಾತ್ರಿ ಬಂದ್
ಹೆಬ್ಬಾಳ ಮೇಲ್ಸೇತುವೆಯಲ್ಲಿ ಬಿಬಿಎಂಪಿ ಕಾಮಗಾರಿ ನಡೆಯುತ್ತಿರುವ ಕಾರಣಕ್ಕೆ ರಾತ್ರಿ ಸಂಚಾರ ನಿರ್ಬಂಧಿಸಲಾಗಿದೆ. ಇದರ ಬದಲಾಗಿ ಪ್ರಯಾಣಿಕರಿಗೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಶನಿವಾರದವರೆಗೂ ಈ ಅನಾನುಕೂಲತೆಯಿರಲಿದೆ. ರಾತ್ರಿ 12 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಡಾಮರೀಕರಣ ಕೆಲಸದ ನಿಮಿತ್ತ ಮೇಲ್ಸೇತುವೆ ಬಂದ್ ಆಗಿರಲಿದೆ.
ಎರಡು ದಿನದಲ್ಲಿ ಕಾಮಗಾರಿ ಮುಗಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಗುರಿ ಹಾಕಿಕೊಳ್ಳಲಾಗಿದೆ. ಆದರೆ ಮಳೆ ಬಂದು ಕೆಲಸಕ್ಕೆ ಅಡಚಣೆಯಾದಲ್ಲಿ ಮತ್ತಷ್ಟು ದಿನ ಕೆಲಸ ನಡೆಯುವ ಸಾಧ್ಯತೆಯಿದೆ.