ಗೋಡಂಬಿ ಆರೋಗ್ಯಕ್ಕೆ ಉತ್ತಮ. ಆದರೆ ಅತಿಯಾದ ಸೇವನೆ ಯಾವತ್ತೂ ಒಳ್ಳೆಯದಲ್ಲ. ಗೋಡಂಬಿಯನ್ನು ಅತಿಯಾಗಿ ಸೇವನೆ ಮಾಡುತ್ತಿದ್ದರೆ ಏನು ಸಮಸ್ಯೆಯಾಗುತ್ತದೆ ನೋಡಿ.
ಅಧಿಕ ಕ್ಯಾಲೊರಿ: ಗೋಡಂಬಿಯಲ್ಲಿ ಕ್ಯಾಲೊರಿ ಹೆಚ್ಚು. ಹೀಗಾಗಿ ಅತಿಯಾಗಿ ಸೇವನೆ ಮಾಡುವುದರಿಂದ ಕ್ಯಾಲೊರಿ ಹೆಚ್ಚಾಗಿ ತೂಕ ಹೆಚ್ಚಳವಾಗುವ ಸಾಧ್ಯತೆಯಿದೆ.
ಹೊಟ್ಟೆಯಲ್ಲಿ ಕಿರಿ ಕಿರಿ, ಗ್ಯಾಸ್: ಗೋಡಂಬಿ ಅತಿಯಾಗಿ ಸೇವಿಸುವುದರಿಂದ ಹೊಟ್ಟೆಯಲ್ಲಿ ಕಿರಿ ಕಿರಿ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಯಾಗುವ ಸಾಧ್ಯತೆಯಿದೆ. ಅತಿಯಾಗಿ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಪ್ರಕ್ರಿಯೆಗೆ ಸಮಸ್ಯೆಯಾಗಬಹುದು.
ಕಿಡ್ನಿ ಸಮಸ್ಯೆ: ಗೋಡಂಬಿಯಲ್ಲಿ ಆಕ್ಸಲೇಟ್ ಅಂಶಗಳು ಹೆಚ್ಚು. ಇವು ಕಿಡ್ನಿ ಸಮಸ್ಯೆಗೆ ಕಾರಣವಾಗಬಹುದು. ವಿಶೇಷವಾಗಿ ಕಿಡ್ನಿ ಕಲ್ಲು ಬರುವ ಸಮಸ್ಯೆ ಅಧಿಕವಾಗಿರುತ್ತದೆ.
ತಲೆನೋವು: ಅಚ್ಚರಿಯಾದರೂ ಇದು ಸತ್ಯ. ಕೆಲವರು ಆಹಾರಗಳಿಗೆ ಸೆನ್ಸಿಟಿವ್ ಆಗಿರುತ್ತಾರೆ. ಅಂತಹವರಿಗೆ ಅತಿಯಾದ ಗೋಡಂಬಿ ಸೇವನೆಯಿಂದ ತಲೆನೋವು ಬಂದರೂ ಅಚ್ಚರಿಯಿಲ್ಲ.
ಒಣ ಹಣ್ಣುಗಳಲ್ಲಿ ಗೋಡಂಬಿ ಪ್ರಮುಖವಾದುದು. ಇದು ಆರೋಗ್ಯಕ್ಕೆ ಉತ್ತಮವೇನೋ ಹೌದು. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾದ ಗೋಡಂಬಿ ಸೇವನೆ ದೈಹಿಕ ಆರೋಗ್ಯದ ಮೇಲೆ ಇಂತಹ ಹಲವು ಅಡ್ಡಪರಿಣಾಮಗಳನ್ನು ಉಂಟು ಮಾಡಬಹುದು ಎಂಬುದು ನೆನಪಿನಲ್ಲಿರಲಿ.