ಮಾನಸಿಕ ಒತ್ತಡ ಕಡಿಮೆ ಮಾಡುವುದು ಹೇಗೆ, ಈ ವಿಧಾನ ಅನುಸರಿಸಿ

Krishnaveni K

ಶನಿವಾರ, 27 ಸೆಪ್ಟಂಬರ್ 2025 (12:08 IST)
ಇತ್ತೀಚೆಗಿನ ದಿನಗಳಲ್ಲಿ ಬಹುತೇಕ ಖಾಯಿಲೆಗಳ ಮೂಲ ಮಾನಸಿಕ ಒತ್ತಡ. ಹೃದಯದ ಸಮಸ್ಯೆ, ಮಧುಮೇಹ, ದೇಹ ತೂಕ ಸೇರಿದಂತೆ ಬಹುತೇಕ ಖಾಯಿಲೆಗಳು ಮಾನಸಿಕ ಒತ್ತಡದಿಂದಾಗಿಯೇ ಬರುತ್ತವೆ. ಇದನ್ನು ಕಡಿಮೆ ಮಾಡಲು ಈ ವಿಧಾನಗಳನ್ನು ತಪ್ಪದೇ ಅನುಸರಿಸಿ.

ದೈಹಿಕ ಚಟುವಟಿಕೆ ಇರಲಿ: ಕುಳಿತಲ್ಲೇ ಕೂರುವ ಬದಲು ನಿಮ್ಮ ದೇಹಕ್ಕೆ ಚಟುವಟಿಕೆ ಕೊಡುವ ಕೆಲಸ ಮಾಡಿ. ದೇಹಕ್ಕೆ ಶ್ರಮ ಕೊಟ್ಟರೆ ಮಾನಸಿಕ ಒತ್ತಡ ಎನ್ನುವುದು ನೆನಪೇ ಆಗಲ್ಲ. ದೈಹಿಕ ಚಟುವಟಿಕೆ ಮಾಡುತ್ತಿದ್ದರೆ ನಿಮ್ಮ ಖುಷಿಯ ಹಾರ್ಮೋನ್ ಗಳು ಆಕ್ಟಿವೇಟ್ ಆಗುತ್ತವೆ.

ಸರಿಯಾದ ನಿದ್ರೆ: ನಿದ್ರಾಹೀನತೆಯಿಂದ ಮಾನಸಿಕ ಒತ್ತಡ ಕಂಡುಬರಬಹುದು. ಹೀಗಾಗಿ ನಿದ್ರೆಗೆ ಪ್ರಾಮುಖ್ಯತೆ ಕೊಡಿ. ಪ್ರತಿನಿತ್ಯ ಒಂದೇ ಸಮಯಕ್ಕೆ ಮಲಗುವುದು, ನಿರ್ದಿಷ್ಟ ಸಮಯದಷ್ಟೇ ನಿದ್ರೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಸಮತೋಲಿತ ಆಹಾರ ಸೇವಿಸಿ: ನಾವು ಸೇವನೆ ಮಾಡುವ ಆಹಾರವೂ ಮುಖ್ಯವಾಗಿರುತ್ತದೆ. ಸಮತೋಲಿತ, ಎಲ್ಲಾ ವಿಧದ ಪೋಷಕಾಂಶಗಳು ಒಳಗೊಂಡಂತಹ ಆಹಾರವನ್ನು ಸೇವನೆ ಮಾಡಿ. ಕೆಫೈನ್ ಅಂಶವಿರುವ, ಆಲ್ಕೋಹಾಲ್ ಅಂಶವಿರುವ, ಧೂಮಪಾನ, ತಂಬಾಕಿನ ಉತ್ಪನ್ನಗಳ ಸೇವನೆ ಒತ್ತಡವನ್ನು ಹೆಚ್ಚು ಮಾಡಬಹುದು.

ಇತರರೊಂದಿಗೆ ಬೆರೆಯಿರಿ: ಆದಷ್ಟು ಸೋಷಿಯಲ್ ಆಗಿ ಇರಿ. ಸಮಾಜಮುಖಿಯಾಗಿ, ಇತರರೊಂದಿಗೆ ಮಾತನಾಡುತ್ತಾ, ಬೆರೆಯುತ್ತಾ ಇದ್ದರೆ ಒತ್ತಡ ಮರೆಯುತ್ತೀರಿ. ಅದೇ ರೀತಿ ನಿಮ್ಮ ಹವ್ಯಾಸಗಳಿಗೆ ಸಮಯ ಕೊಡಿ.

ದೇಹ, ಮನಸ್ಸಿಗೆ ವಿಶ್ರಾಂತಿ: ಇದು ಸಿಗಬೇಕೆಂದರೆ ಯೋಗ, ಪ್ರಾಣಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಒತ್ತಡ ಕಡಿಮೆಯಾಗುತ್ತದೆ. 1 ರಿಂದ 4 ಎಣಿಸುವಷ್ಟು ಹೊತ್ತು ಉಸಿರು ಒಳಗೆ ಎಳೆದುಕೊಂಡು 7 ಕೌಂಟ್ ನಷ್ಟು ಉಸಿರು ಬಿಗಿಹಿಡಿಯಬೇಕು. ಬಳಿಕ ನಿಧಾನವಾಗಿ 8 ಕೌಂಟ್ ಆಗುವವರೆಗೆ ಉಸಿರನ್ನು ಹೊರಗೆ ಹಾಕಬೇಕು.

ಈ ಕೆಲವು ಟಿಪ್ಸ್ ಗಳಿಂದ ಮಾನಸಿಕ ಒತ್ತಡವನ್ನು ತಕ್ಕಮಟ್ಟಿಗೆ ಕಡಿಮೆ ಮಾಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ