ಜಗತ್ತಿನ ಅತೀ ಶ್ರೀಮಂತರ ಪಟ್ಟಿ ಬಿಡುಗಡೆ: ಬಿಲ್ ಗೇಟ್ಸ್ ಹಿಂದಿಕ್ಕಿದ ಅಮೆಜಾನ್ ಸಿಇಓ

ಶುಕ್ರವಾರ, 28 ಜುಲೈ 2017 (01:48 IST)
ವಾಷಿಂಗ್ಟನ್: ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ಮೈಕ್ರೋಸಾಫ್ಟ್  ಸಹ ಸಂಸ್ಥಾಪಕ ಬಿಲ್ ಗೇಟ್ಸ್ ರನ್ನು ಹಿಂದಿಕ್ಕಿರುವ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಸಿಇಓ ಜೆಫ್ ಬೆಜೋಸ್ ವಿಶ್ವದ ಅತೀ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
 
ಗುರುವಾರ ಮಾರುಕಟ್ಟೆ ಆರಂಭದಲ್ಲಿ ಅಮೆಜಾನ್ ಷೇರು ಬೆಲೆಗಳು ಶೇ.1.6ರಷ್ಟು ಏರಿಕೆಯಾಗಿದ್ದು ಜೆಫ್ ಬೆಜೋಸ್ ಗೆ ಹೆಚ್ಚುವರಿಯಾಗಿ 1.4 ಶತಕೋಟಿ ಡಾಲರ್ ಗಳ ಅದೃಷ್ಟ ಒಲಿಯಿತು. ಇದರಿಂದ ಅವರ ಸಂಪತ್ತು 90 ಶತಕೋಟಿ ಡಾಲರ್ ಗಳನ್ನು ಮೀರಿತು ಎಂದು ಬ್ಲೂಮ್ ಬರ್ಗ್ , ಫೋರ್ಬ್ಸ್ ವರದಿ ಮಾಡಿದೆ.
 
ಕೇವಲ ಒಂದು ದಿನದ ಮಾರುಕಟ್ಟೆ ಷೇಋಗಳ ವ್ಯತ್ಯಾಸದಲ್ಲಿ ಜೆಫ್ ಬೆಜೋಸ್, ಬಿಲ್ ಗೇಟ್ಸ್ ಹಿಂದಿಕ್ಕಿದ್ದಾರೆ.  ಅಂದರೆ ಬುಧವಾರ ಷೇರು ಮಾರುಕಟ್ಟೆ ಕೊನೆಯಾಗುವ ವೇಳೆಗೆ ಬಿಲ್ ಗೇಟ್ಸ್ ಸಂಪತ್ತು 90 ಶತಕೋಟಿ ಡಾಲರ್ ನಷ್ಟಿತ್ತು. ಅವರಿಗೆ ಹತ್ತಿರವಾಗಿ 89 ಶತಕೋಟಿ ಡಾಲರ್ ವರೆಗೂ ಬೆಜೋಸ್ ಹೋಗಿದ್ದರು. ಆದರೆ ಗುರುವಾರ ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ಅಮೆಜಾನ್ ಷೇರುಗಳು ಏರಿಕೆಯಾಗಿದ್ದು, ಬಿಲ್ ಗೇಟ್ಸ್ ಸಂಪತ್ತನ್ನು ಮೀರಿದ ಬೆಜೋಸ್ 90 ಶತ ಕೋಟಿ ಡಾಲರ್ ಸೂಚ್ಯಂಕವನ್ನು ತಲುಪಿದರು.
 

ವೆಬ್ದುನಿಯಾವನ್ನು ಓದಿ