ಕೇಂದ್ರ ವಿರುದ್ಧ ಹರಿಹಾಯ್ದ ಬೆನ್ನಲ್ಲೇ ಪ್ರಧಾನಿ ಮೋದಿ ಪಕ್ಕದಲ್ಲೇ ಕುಳಿತು ಪ್ರಯಾಣಿಸಿದ ಡಿಕೆ ಶಿವಕುಮಾರ್‌

Sampriya

ಭಾನುವಾರ, 10 ಆಗಸ್ಟ್ 2025 (13:12 IST)
Photo Credit X
ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಸೂಕ್ತ ಅನುದಾನ ದೊರೆಯುತ್ತಿಲ್ಲ ಎಂದು ಮೋದಿ ವಿರುದ್ಧ ಅಸಮಾಧಾನ ಹೊರಹಾಕಿದ ಕೆಲ ಹೊತ್ತಲ್ಲೇ ಪ್ರಧಾನಿಯವರ ಜತೆಯೇ ಡಿಕೆಶಿ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದರು.

ಪ್ರಧಾನಿ ಮೋದಿ ಬೆಂಗಳೂರು ಭೇಟಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ನಮಗೆ ಸೂಕ್ತ ಅನುದಾನವನ್ನು ನೀಡುತ್ತಿಲ್ಲ. ಬೆಂಗಳೂರನ್ನು ನಿರ್ಲಕ್ಷಿಸಲಾಗಿದೆ. ನಗರಕ್ಕೆ ಏನು ಅಗತ್ಯವಿದೆ. ಏನನ್ನೂ ನೀಡಬೇಕು ಎಂಬುದನ್ನು ಪ್ರಧಾನಿಗೆ ಹೇಳುತ್ತೇನೆ ಎಂದರು.

ಈ ಹೇಳಿಕೆ ನೀಡಿದ ಕೆಲಹೊತ್ತಲ್ಲೇ ಪ್ರಧಾನಿಯವರ ಜತೆ ಮೆಟ್ರೋದಲ್ಲಿ ಡಿಕೆ ಶಿವಕುಮಾರ್ ಅವರು ಪ್ರಯಾಣ ಬೆಳೆಸಿದರು. ಅದಲ್ಲದೆ ಕೆಲ ವಿಚಾರಗಳನ್ನು ಮಾತನಾಡಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯವರು ಪ್ರಧಾನಿ ಇನ್ನೊಂದು ಪಕ್ಕದಲ್ಲಿ ಕೂತಿದ್ದರು. 

ಬಹು ನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗ ಲೋಕಾರ್ಪಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ