ಪತ್ನಿ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ವಕೀಲನಾದ

ಗುರುವಾರ, 14 ಮೇ 2015 (17:18 IST)
ಕೆಲವು ಮಹಿಳೆಯರು ತಮ್ಮ ಪರವಾಗಿ ಇರುವ ಕೆಲವು ಕಾನೂನಿನ ದುರ್ಬಳಕೆ ಮಾಡಿಕೊಂಡು ತಮ್ಮ ಗಂಡ ಅಥವಾ ಅವರ ಕುಟುಂಬದವರ ಮೇಲೆ ಅತ್ಯಾಚಾರ, ವರದಕ್ಷಿಣೆ ಹಿಂಸೆಯ ಸುಳ್ಳು ಕೇಸನ್ನು ದಾಖಲಿಸಿ ಜೈಲಿಗೆ ಕಳುಹಿಸುವುದರ ಬಗ್ಗ ಓದಿರುತ್ತೀರಿ. ಕೇಳಿರುತ್ತೀರಿ. 
 
ತಾವು ಮಾಡದ ತಪ್ಪಿಗೆ ಜೈಲಿನಲ್ಲಿ ಕೊಳೆಯುವ ಅಮಾಯಕ ಗಂಡಂದಿರ ಸಂಖ್ಯೆ ಏನೂ ಕಡಿಮೆ ಇಲ್ಲ. ಆದರೆ ಎಲ್ಲ ಗಂಡಸರು ಒಂದೇ ರೀತಿ ಇರುವುದಿಲ್ಲ. ಕೆಲವರು ತಮಗಾದ ಅನ್ಯಾಯದ ವಿರುದ್ಧ ಹೋರಾಡಿ ತಮ್ಮ ನಿರಪರಾಧಿತ್ವವನ್ನು ಸಾಬೀತು ಪಡಿಸುತ್ತಾರೆ. ಆದರೆ ಪಂಕಜ್ ಚಾವ್ಡಾ ಎಂಬ ವ್ಯಕ್ತಿ ತನ್ನ ಪತ್ನಿ ತನಗೆ ಮಾಡಿದ ಅನ್ಯಾಯಕ್ಕೆ ತಕ್ಕ ಪಾಠ ಕಲಿಸಿದ್ದಾನೆ. 
 
ಚಾವ್ಡಾ ಪತ್ನಿ ಆತನ ಮೇಲೆ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಳು. ಆತನ ನಿರಪರಾಧಿತ್ವ ಸಿಟಿ ಸೆಷನ್ಸ್ ಕೋರ್ಟ್ ಮತ್ತು ಗುಜರಾತ್ ಸುಪ್ರೀಕೋರ್ಟ್‌ನಲ್ಲಿ ರುಜುವಾತಾಗಿದೆ. 
 
 ಕಳೆದ 10 ವರ್ಷಗಳಿಂದ ಚಾವ್ಡಾ ತಾನು ಮಾಡಿಲ್ಲದ ತಪ್ಪಿಗೆ ಕೋರ್ಟ್‌ಗೆ ಅಲೆಯುತ್ತಿದ್ದು, ಸೆರೆಮನೆವಾಸವನ್ನು ಕೂಡ ಅನುಭವಿಸಿದ್ದಾನೆ. ತಾನು ನ್ಯಾಯಕ್ಕಾಗಿ ಪರದಾಡುತ್ತಿದ್ದ ಸಂದರ್ಭದಲ್ಲಿ ಆತನಿಗೆ ಕಾನೂನನ್ನು ಅಭ್ಯಸಿಸಿ ತನ್ನ ಕೇಸ್‌ನ್ನು ತಾನೇ ಏಕೆ ವಾದಿಸಬಾರದು ಎಂದೆನಿಸಿದೆ ಮತ್ತು ತನ್ನ ಆಲೋಚನೆಯನ್ನು ಆತ ಕಾರ್ಯರೂಪಕ್ಕೆ ತಂದಿದ್ದಾನೆ. 
 
ಈಗ ಕಾನೂನು ಪದವೀಧರನಾಗಿರುವ ಚಾವ್ಡಾ ತನ್ನ ಪತ್ನಿಯ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹೂಡಿ 50 ಲಕ್ಷ ಪರಿಹಾರಧನವನ್ನು  ಕೋರಿದ್ದಾನೆ. ಈ ಮೂಲಕ ಪತ್ನಿ ಎಸಗಿದ್ದ ಅನ್ಯಾಯಕ್ಕೆ ಪ್ರತೀಕಾರವನ್ನು ತೆಗೆದುಕೊಂಡಿದ್ದಾನೆ. 

ವೆಬ್ದುನಿಯಾವನ್ನು ಓದಿ