ತಮ್ಮನನ್ನು ಹೊತ್ತುಕೊಂಡು 8 ಕಿಲೋಮೀಟರ್ ನಡೆದು ಆಸ್ಪತ್ರೆಗೆ ಬಂದ ಪುಟ್ಟ ಬಾಲಕಿ

ಮಂಗಳವಾರ, 8 ಸೆಪ್ಟಂಬರ್ 2015 (15:54 IST)
ಅನಾರೋಗ್ಯ ಪೀಡಿತ ತಮ್ಮನಿಗೆ ಚಿಕಿತ್ಸೆ ಕೊಡಿಸಲು 11 ವರ್ಷದ ಬಾಲಕಿಯೊಬ್ಬಳು ಆತನನ್ನು ಹೊತ್ತುಕೊಂಡು 8 ಕಿಲೋಮೀಟರ್ ನಡೆದುಕೊಂಡು ಆಸ್ಪತ್ರೆಗೆ ಬಂದ ಮನಕಲಕುವ ಘಟನೆ ಜಾರ್‌ಖಂಡ್‌ನಲ್ಲಿ ಬೆಳಕಿಗೆ ಬಂದಿದೆ. 
 
ಗೊಡ್ಡಾ ಜಿಲ್ಲೆಯ ಚಂದನಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ನಡೆದಿದ್ದು, ತನ್ನ 7 ವರ್ಷದ ತಮ್ಮನಿಗೆ ಆರೋಗ್ಯ ಕೆಟ್ಟಾಗ ಬುಡಕಟ್ಟು ಜನಾಂಗದ ಬಾಲಕಿ ಮಾಲತಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಅವರ ಊರ ಸಮೀಪದಲ್ಲಿ ಆಸ್ಪತ್ರೆ ಸೌಲಭ್ಯವಿರಲಿಲ್ಲ. ಆಸ್ಪತ್ರೆಗೆ ಹೋಗಬೇಕೆಂದರೆ  8 ಕಿಮೀ ದೂರ ನಡೆಯಬೇಕಿತ್ತು. 
 
ಆದರೆ ತನ್ನ ತಮ್ಮನಿಗೆ ಚಿಕಿತ್ಸೆ ಕೊಡಿಸಬೇಕೆಂಬುದೊಂದೆ ಬಾಲಕಿಯ ತಲೆಯಲ್ಲಿತ್ತು. ಹೀಗಾಗಿ ಆಕೆ ಯಾರಿಗೂ ಅಂಗಲಾಚದೆ ಆತನನ್ನು ಹೆಗಲಲ್ಲಿ ಹೊತ್ತುಕೊಂಡು 8 ಕೀಲೋಮೀಟರ್‌ವರೆಗೆ ನಡೆದುಕೊಂಡು ಬಂದಿಲ್ಲ. ವಿಪರ್ಯಾಸದ ಸಂಗತಿ ಎಂದರೆ 11 ರ ಬಾಲೆ ತಮಗಿಂತಲೂ ಸ್ವಲ್ಪ ಚಿಕ್ಕವನಾದ ತಮ್ಮನನ್ನು ಹೊತ್ತುಕೊಂಡು ಹೋಗುವುದನ್ನು ನೋಡಿದವರ್ಯಾರು ಸಹ ಆಕೆಯ ಸಹಾಯಕ್ಕೆ ಬಂದಿಲ್ಲ. 
 
ಬಾಲಕಿಯ ಈ ಕತೆ ಕೇಳಿದ ಸಾಮಾಜಿಕ ಕಾರ್ಯಕರ್ತ ಮನೋಜ್ ಭಗತ್ ಎನ್ನುವವರು ತಕ್ಷಣ ಆಸ್ಪತ್ರೆಗೆ ಆಗಮಿಸಿ ಆಕೆಗೆ ಸಹಾಯ ಮಾಡಿದ್ದಾರೆ.
 
ಬಾಲಕಿ ಮತ್ತು ತಮ್ಮ ಅನಾಥರಾಗಿದ್ದು. ಕೂಲಿ ಮಾಡಿಕೊಂಡು ಬದುಕು ಸಾಗಿಸುವ ಅಜ್ಜಿಯೊಬ್ಬರು ಅವರನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. 
 
ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಜಾರಖಂಡ್‌ನಲ್ಲಿ ಆರೋಗ್ಯ ಸೌಲಭ್ಯ ತೀರಾ ಹಿಂದುಳಿದಿದೆ. ನಕ್ಸಲ್ ಪೀಡಿತ ಪ್ರದೇಶದಲ್ಲಿ ಸಾರಿಗೆ, ಶಿಕ್ಷಣ ಸೌಲಭ್ಯವು ಕೂಡ ಅತ್ಯಂತ ಕೀಳುಮಟ್ಟದಲ್ಲಿದೆ.

ವೆಬ್ದುನಿಯಾವನ್ನು ಓದಿ