ನನ್ನ ಪಪ್ಪ ಅಂದ್ರೆ ಹಾಗೇನೇ...ತುಂಬಾನೇ ಸ್ವೀಟ್'

ಗುರುವಾರ, 14 ಜೂನ್ 2018 (15:45 IST)
ಹೌದು, ಇಂದು '.ಅಪ್ಪಂದಿರ ದಿನ'. ತನ್ನ ಸಂಪೂರ್ಣ ಜೀವನವನ್ನೇ ಮಕ್ಕಳ ಏಳಿಗೆಗಾಗಿ ಮುಡಿಪಾಗಿಡುವ ದೇವರಂತಹ ಅಪ್ಪನನ್ನು ಪ್ರತಿಬಿಂಬಿಸುವ ದಿನ...
 
 
F- faithfull 
A- Always 
T- trustworthy 
H- honoring 
E- Ever loving 
R- Righteous 
S- Supportive 
 
 
ಜೂನ್ ತಿಂಗಳ ಮೂರನೇ ಭಾನುವಾರ ತಂದೆಯರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದರಂತೆ ಇಂದು ವಿಶ್ವದೆಲ್ಲೆಡೆ 'ಫಾದರ್ಸ್ ಡೇ' ಆಚರಿಸಲಾಗುತ್ತಿದೆ. 
 
'ನನ್ನ ಪಪ್ಪ ಅಂದ್ರೆ ಹಾಗೇನೇ...ತುಂಬಾ ಸ್ವೀಟ್'... 
ಹಿಂದೊಂದು ಕಾಲವಿತ್ತು. ಸಂಸಾರದ ಹೊಣೆ ಹೊತ್ತ ಅಪ್ಪ ಕಟ್ಟುನಿಟ್ಟಿನ ತಾಕೀತುಗಾರನಾಗಿರುತ್ತಿದ್ದ. ಆದರೆ ಇದೀಗ ಕಾಲ ಬದಲಾಗಿದೆ. ಅಮ್ಮನ ವಾತ್ಸಲ್ಯದಷ್ಟೇ ಅಪ್ಪನ ಮಾರ್ಗದರ್ಶನ ಕೂಡಾ ಬೆಳೆಯುತ್ತಿರುವ ಮಗುವಿಗೆ ಅತ್ಯವಶ್ಯಕವಾಗಿ ಪರಿಣಮಿಸಿದೆ. 
 
ಚಿಕ್ಕವನಿರುವಾಗ ಅಪ್ಪಂದಿರ ಬಗ್ಗೆ ಭಯ...ಭಕ್ತಿ..ಗೌರವ ಇದ್ದರೂ ಮಕ್ಕಳಿಗೆ ಅಪ್ಪನೇ ಬೆಸ್ಟ್ ಫ್ರೆಂಡ್ ಆಗಿದ್ದಾರೆ. ಬಾಲ್ಯದಲ್ಲಂತೂ ಎಲ್ಲದಕ್ಕೂ ಅಪ್ಪ ಬೇಕು. ಮಕ್ಕಳ ಜತೆ ಮಗುವಾಗಿ ಬರೆಯುತ್ತಾನೆ. 
 
ಹೀಗೆ ಎಲ್ಲ ವಿಧದಲ್ಲಿಯೂ ಪ್ರೀತಿ, ವಾತ್ಸಲ್ಯ, ಆಸರೆ, ಸ್ಫೂರ್ತಿ ಆಗಿರುವ ಅಪ್ಪಂದಿರು ಮಕ್ಕಳ ಒಳ್ಳೆಯ ಬದುಕು ರೂಪಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಈ ಸುದಿನದಲ್ಲಿ 'ಫಾದರ್ಸ್ ಡೇ' ಶುಭಾಶಯಗಳು! 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ