ಲಾಕ್ ಡೌನ್ ಎಫೆಕ್ಟ್: ನಂಜನಗೂಡು ನಂಜುಂಡನ ಆದಾಯದಲ್ಲಿ ಖೋತಾ

ಶನಿವಾರ, 17 ಜುಲೈ 2021 (14:35 IST)
ಕೊರೊನಾ ಎರಡನೇ ಅಲೆಯ ಅಬ್ಬರ ಹಾಗೂ ಲಾಕೌಡನ್ ನಿಂದ ಭಕ್ತರ ಪ್ರವೇಶ ನಿಷೇಧ ಹಿನ್ನೆಲೆಯಲ್ಲಿ ನಂಜುಂಡನ ಹುಂಡಿ ಹಣ ಸಂಗ್ರಹದಲ್ಲಿ ಭಾರಿ ಇಳಿಕೆಯಾಗಿದ್ದು, 2 ತಿಂಗಳ ಅವಧಿಗೆ ಕೇವಲ 56 ಲಕ್ಷ 11 ಸಾವಿರ 966 ರೂ. ಮಾತ್ರ ಸಂಗ್ರಹವಾಗಿದೆ.
ತಿಂಗಳಿಗೆ ಕೋಟಿಗಟ್ಟಲೆ ಆದಾಯ ಗಳಿಸುತ್ತಿದ್ದ ನಂಜುಂಡನ ಹುಂಡಿಯಲ್ಲಿ ಬಿದ್ದ ಹಣದ ಎಣಿಕೆ ಕಾರ್ಯ ಶುಕ್ರವಾರ ನಡೆದಿದ್ದು, ಶೇ.50ಕ್ಕಿಂತ ಕಡಿಮೆ ಆದಾಯ ಗಳಿಸಿದೆ.
ಹುಂಡಿಯಲ್ಲಿ 5 ವರ್ಷಗಳ ಹಿಂದೆ ಕೇಂದ್ರ ಸರಕಾರ ನಿಷೇಧಿಸಿದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿದ್ದು, ಇದರಮೌಲ್ಯ 11,500 ರೂ.ಆಗಿದೆ.  ಅಲ್ಲದೇ 51 ಗ್ರಾಂ ಚಿನ್ನ, 1.5 ಕೆ.ಜಿ.ಬೆಳ್ಳಿ ಮತ್ತು 2 ವಿದೇಶಿ ಕರೆನ್ಸಿಗಳೂ ಸಹ ಸಂಗ್ರಹವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ