ಬಸ್ ಪ್ರಯಾಣ ದರ ಏರಿಕೆ ಇಲ್ಲ

ಶನಿವಾರ, 18 ಫೆಬ್ರವರಿ 2017 (07:08 IST)
ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣದಿಂದಾಗಿ ಸಾರಿಗೆ ಸಂಸ್ಥೆಗೆ ಒಂದು ತಿಂಗಳಲ್ಲಿ 60ಕೋಟಿ ನಷ್ಟವಾಗಿದೆ, ಆದರೆ ಬಸ್ ಇದನ್ನು ಭರಿಸಲು ಬಸ್ ಪ್ರಯಾಣ ದರ ಹೆಚ್ಚಿಸುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟ ಪಡಿಸಿದ್ದಾರೆ.

ಕೋಲಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದ ಅವರು, ನೋಟು ಅಮಾನ್ಯದಿಂದ ಸಂಸ್ಥೆಗೆ ಆಗಿರುವ |ನಷ್ಟವನ್ನು ಭರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಹೊರತಾಗಿ ಪ್ರಯಾಣ ದರವನ್ನು ಹೆಚ್ಚಿಸಿ ಜನತೆಗೆ ಹೊರೆ ಹಾಕುವುದಿಲ್ಲ, ಎಂದರು
 
ಖಾಸಗಿ ಬಸ್‌ಗಳ ಅನಧಿಕೃತ ಸಂಚಾರಕ್ಕೆ ಕಡಿವಾಣ ಹಾಕುವ ಜೊತೆಗೆ ಅನುಮತಿ ಪಡೆದ ಮಾರ್ಗದಲ್ಲೇ ಸಂಚರಿಸುವುದರ ಬಗ್ಗೆ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರಯಾಣಿಕರ ಸಾರಿಗೆ ಸಮಸ್ಯೆಗಳ ಪ್ರತಿ ತಾಲ್ಲೂಕಿನಲ್ಲಿ ಆಯಾ ಶಾಸಕರು ಮತ್ತು ಇತರ ಜನಪ್ರತಿನಿಧಿಗಳ ಜತೆ ಜನಸ್ಪಂದನ ನಡೆಸಲು ಎಲ್ಲ ಜಿಲ್ಲಾ ಸಾರಿಗೆ ವಿಭಾಗ ನಿಯಂತ್ರಣಾಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ