ಗೊಂಬೆಯಾಟದ ಜೊತೆಗೆ ರಾಜಧಾನಿ ಜನತೆಗೆ ಥರಹೇವಾರಿ ರಾಜಸ್ಥಾನಿ ಆಹಾರ ಸವಿಯುವ ಯೋಗ: ವಿವರಗಳಿಗೆ ಇಲ್ಲಿ ನೋಡಿ

Krishnaveni K

ಸೋಮವಾರ, 19 ಆಗಸ್ಟ್ 2024 (14:13 IST)
ಬೆಂಗಳೂರು: ಬೆಂಗಳೂರಿನ ಮೊಟ್ಟ ಮೊದಲ ಶೇಖಾವತ್ ಸಂಪ್ರದಾಯದ ರೆಸ್ಟೋರೆಂಟ್ ಕೇಸರಿಯಾ, ರಾಜಸ್ಥಾನಿ ಬೊಂಬೆಯಾಟದ ಅಪರೂಪ ಕಲೆಗಳನ್ನು ಪ್ರದರ್ಶಿಸುವ ಅದ್ಭುತ ಸಾಂಸ್ಕೃತಿಕ ಕಾರ್ಯಕ್ರಮವಾದ 'ರಂಗಿಲೋ ರಾಜಸ್ಥಾನ್' ಉತ್ಸವ ಆಯೋಜಿಸಿದೆ. ಈ ಉತ್ಸವವು ಆಗಸ್ಟ್  25ರವರೆಗೆ ಕೇಸರಿಯಾದ ಇಂದಿರಾನಗರ ಶಾಖೆಯಲ್ಲಿ ನಡೆಯಲಿದೆ. ಮಧ್ಯಾಹ್ನ 12 ರಿಂದ 3.30 ರವರೆಗೆ ಮತ್ತು ಸಂಜೆ 7 ರಿಂದ ರಾತ್ರಿ 10 ರವರೆಗೆ ಬೊಂಬೆಯಾಟದ ಪ್ರದರ್ಶನಗಳು ಆಯೋಜನೆಗೊಂಡಿವೆ.

ರಂಗಿಲೋ ರಾಜಸ್ಥಾನ್ ಉತ್ಸವವು ವೀಕ್ಷಕರಿಗೆ ಮರೆಯಲಾಗದ ಅನುಭವ ನೀಡಲಿದೆ. ಇದು ರಾಜಸ್ಥಾನ ಮೂಲದ ಬೊಂಬೆಯಾಟಗಾರರು ಪ್ರದರ್ಶಿಸುವ ಸಾಂಪ್ರದಾಯಿಕ 'ಕತ್ಪುಟ್ಲಿ' ಬೊಂಬೆಯಾಟ ಕಲೆಯ ಪ್ರಸ್ತುತಿಯಾಗಿದೆ. ಕಲಾವಿದರು ಜನಪ್ರಿಯ ರಾಜಸ್ಥಾನಿ ಜಾನಪದ ಹಾಡುಗಳಿಗೆ ಪೂರಕವಾಗಿರುವ ಮಂತ್ರಮುಗ್ಧಗೊಳಿಸುವಂಥ ಬೊಂಬೆಗಳ ನೃತ್ಯಗಳನ್ನು ಇಲ್ಲಿ  ಪ್ರದರ್ಶಿಸಲಿದ್ದಾರೆ. ಈ ಮೂಲಕ ರಾಜಸ್ಥಾನದಲ್ಲಿರುವ ಶ್ರೀಮಂತ ಕಥೆಗಳನ್ನು ಹೇಳುವ ಪರಂಪರೆಗೆ ಜೀವ ತುಂಬಲಿದ್ದಾರೆ.  ಬೊಂಬೆಯಾಟದ ಪ್ರದರ್ಶನಗಳು ಸಂಕ್ಷಿಪ್ತ ನಿರೂಪಣೆ ಮತ್ತು ಆತ್ಯಾಕರ್ಷಕ ರಂಗಸಜ್ಜಿಕೆಯ ಸಮ್ಮಿಲನವಾಗಿದೆ.  ಸಾಮ್ರಾಟರು, ರಾಜವಂಶಗಳಲ್ಲಿ ನಡೆದಿರುವ ಪ್ರೀತಿ ಮತ್ತು ಪ್ರಣಯದ ಕಥೆಗಳನ್ನು ಇಲ್ಲಿ ಪ್ರಸ್ತುತಪಡಿಸಲಾಗುತ್ತದೆ.

ಬೊಂಬೆ ಪ್ರದರ್ಶನದ ಜೊತೆಗೆ, ಕೇಸರಿಯಾ ರೆಸ್ಟೋರೆಂಟ್ನಲ್ಲಿ ಸಾಂಪ್ರದಾಯಿಕ ಭಕ್ಷ್ಯಗಳು ಮತ್ತು ಸಿಹಿತಿಂಡಿಗಳನ್ನು ಒಳಗೊಂಡ ವಿಶೇಷ ಆಹಾರ ಮೆನುವನ್ನು ಸಿದ್ಧಪಡಿಸಲಾಗಿದೆ. ಅತಿಥಿಗಳು ಮಸಾಲಾ ಚಹಾಗಳು, ಗುಲಾಬ್ ಶರ್ಬತ್ ಮತ್ತು ಪುದಿನಾ ನೀಂಬು ಪಾನಿಯಂತಹ ಆಹ್ಲಾದಕಾರಿ ಪಾನೀಯಗಳನ್ನು ಸವಿಯಬಹುದು.  ಮೆನುವಿನಲ್ಲಿ ರಬ್ಡಿಯೊಂದಿಗೆ ಜಿಲೇಬಿ ರಸಮಲೈ ಸ್ಯಾಂಡ್ ವಿಚ್ ಮತ್ತು ಮಲೈ ಘೇವಾರ್ ನಂತಹ ಸಿಹಿತಿಂಡಿಗಳಿವೆ. ರುಚಿಕರವಾದ ಆಯ್ಕೆಗಳಲ್ಲಿ ಆಲೂ ಮಟರ್ ಸಮೋಸಾ, ಬಾಜ್ರೆ ಕಿ ಟಿಕ್ಕಿ ಮತ್ತು ಕಲ್ಮಿ ವಡಾ ಸೇರಿವೆ. ಮೇನ್  ಕೋರ್ಸ್ನಲ್ಲಿ ಸಾದಾ ಬಾಟಿಯೊಂದಿಗೆ ದಾಲ್ ಪಂಚಮೆಲ್, ಮಟರ್ ಪನೀರ್ ಬಾಟಿ ಹಾಗೂ ರುಚಿಕರ ಕರಿಗಳಾದ ಪನೀರ್ ಲಾಲ್ ಮಿರ್ಚ್ ಮತ್ತು ಪಂಚಮೆಲೆ ಕಾ ಸಾಗ್ ಸವಿಯಬಹುದು. ಕೇಸರಿಯಾ ಕುಲ್ಫಿ ಮತ್ತು ಚುಕಂದರ್ ಹಲ್ವಾದಂತಹ ಸಿಹಿತಿಂಡಿಗಳನ್ನು ತಿನ್ನುವ ಮೂಲಕ  ರಾಜಸ್ಥಾನಿ ಪಾಕಶಾಲೆಯ ಖಾದ್ಯಗಳ ಸವಿಯನ್ನು ಉಣ್ಣಬಹುದು.

ಕಾರ್ಯಕ್ರಮದ ವಿವರಗಳು

ವಿಶೇಷ  ಗೊಂಬೆಗಳ ಪ್ರದರ್ಶನ: ಸಾಂಪ್ರದಾಯಿಕ ರಾಜಸ್ಥಾನಿ ಬೊಂಬೆಯಾಟಗಾರರಿಂದ ದೈನಂದಿನ ಪ್ರದರ್ಶನಗಳು.
ಯಾವಾಗ: 14 ರಿಂದ 25 ಆಗಸ್ಟ್ 2024
ಸ್ಥಳ: ಕೇಸರಿಯಾ, ಇಂದಿರಾನಗರ, ಬೆಂಗಳೂರು
ವಿಳಾಸ: ಕೇಸರಿಯಾ ರೆಸ್ಟೋರೆಂಟ್, #No 315, 1ನೇ ಮಹಡಿ, 100 ಅಡಿ ರಸ್ತೆ, ಅಂಚೆ ಕಚೇರಿ ಎದುರು, ಬಿನ್ನಮಂಗಲ, ಹಂತ 1, ಇಂದಿರಾ ನಗರ, ಬೆಂಗಳೂರು, ಕರ್ನಾಟಕ: 560038.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ