ರಸ್ತೆ ದುರಸ್ತಿ ಮಾಡಲು ಟ್ವೀಟ್ ಮಾಡಿ ಫಜೀತಿಗೊಳಗಾದ ಕೃಷ್ಣಭೈರೇಗೌಡರಿಂದ ಸ್ಪಷ್ಟನೆ

Krishnaveni K

ಶುಕ್ರವಾರ, 16 ಆಗಸ್ಟ್ 2024 (16:38 IST)
ಬೆಂಗಳೂರು: ರಸ್ತೆ ದುರಸ್ತಿ ಮಾಡಿ ಎಂದು ವಿಪಕ್ಷಗಳಿಂದ ಚಾಟಿ ಬೀಸಿಕೊಂಡು ಫಜೀತಿಗೊಳಗಾಗಿದ್ದ ಸಚಿವ ಕೃಷ್ಣಭೈರೇಗೌಡ ಈಗ ತಮ್ಮ ಟ್ವೀಟ್ ಗೆ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನ ವೀರಣ್ಣ ಪಾಳ್ಯದಿಂದ ಹೆಬ್ಬಾಳ ಕಡೆಗೆ ಸಾಗುವ ರಿಂಗ್ ರೋಡ್ ಸರ್ವಿಸ್ ರಸ್ತೆಯಲ್ಲಿ ರಸ್ತೆ ಹಳ್ಳ ಬಿದ್ದಿದೆ ಸರಿಪಡಿಸಿ ಎಂದು ಸಚಿವ ಕೃಷ್ಣಭೈರೇಗೌಡ ಸೋಷಿಯಲ್ ಮೀಡಿಯಾ ಎಕ್ಸ್ ಪುಟದಲ್ಲಿ ಟ್ವೀಟ್ ಮಾಡಿದ್ದರು. ಇದಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಸ್ವತಃ ಸರ್ಕಾರದ ಸಚಿವರೇ ಅಧಿಕಾರಿಗಳಿಗೆ ಬೇಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದರೆ ಈ ಸರ್ಕಾರ ಯಾವ ಮಟ್ಟಿಗಿದೆ ಎಂದು ಲೇವಡಿ ಮಾಡಿದ್ದರು.

ಇದು ವಿವಾದವಾಗುತ್ತಿದ್ದಂತೇ ಈಗ ಕೃಷ್ಣಭೈರೇಗೌಡರು ಸ್ಪಷ್ಟನೆ ನೀಡಿದ್ದಾರೆ. ರಸ್ತೆ ದುರಸ್ತಿ ಮಾಡುವ ಕುರಿತಂತೆ ಅಧಿಕಾರಿಗಳ ಗಮನಕ್ಕೆ ತರಲು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದೆ. ಎಚ್ಚೆತ್ತುಕೊಂಡು ಜನರ ಕೆಲಸ ಮಾಡಲಿ ಎಂದು ನನ್ನ ಉದ್ದೇಶವಷ್ಟೇ ಎಂದಿದ್ದಾರೆ.

ಅಧಿಕಾರಿಗಳಿಗೆ ಫೋನ್, ಮೆಸೇಜ್ ಯಾವ ಮುಖಾಂತರವೂ ಸೂಚನೆ ಕೊಡಬಹುದು. ಆದರೆ ನಾನು ಸಾಮಾಜಿಕ ಜಾಲತಾಣದ ಮೂಲಕ ಸೂಚನೆ ಕೊಟ್ಟೆ. ಆದರೆ ಇದಕ್ಕೆ ಈಗ ವಿಪಕ್ಷಗಳು ನಾನಾ ರೀತಿಯ ಬಣ್ಣ ಕಟ್ಟುತ್ತಿದ್ದಾರೆ ಎಂದು ಸಚಿವ ಕೃಷ್ಣಭೈರೇಗೌಡ ಸಮಜಾಯಿಷಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ