ಸೇಡಿಗೆ ಸೇಡು ಮುಯ್ಯಿಗೆ ಮುಯ್ಯಿ ಕೊಡಬೇಕು : ರೇಣುಕಾಚಾರ್ಯ

ಗುರುವಾರ, 30 ಜೂನ್ 2022 (08:59 IST)
ದಾವಣಗೆರೆ : ನಾವು ಕೈಗೆ ಬಳೆ ಹಾಕಿಕೊಂಡಿಲ್ಲ. ಸೇಡಿಗೆ ಸೇಡು ಮುಯ್ಯಿಗೆ ಮುಯ್ಯಿ, ಯಾರು ಹಿಂದೂಗಳ ಮೇಲೆ ದಾಳಿ ಮಾಡುತ್ತಾರೆ ನಾವು ಕೂಡ ಅಂತಹವರನ್ನು ಕತ್ತು ಸೀಳಿ ಪ್ರತ್ಯೋತ್ತರ ಕೊಟ್ಟಗ ಮಾತ್ರ,

ಕನ್ಹಯ್ಯ ಲಾಲ್ ಆತ್ಮಕ್ಕೆ ಶಾಂತಿ ಸಿಗುತ್ತೆ ಎಂದು ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕನ್ಹಯ್ಯ ಲಾಲ್ ಹತ್ಯೆ ಮಾಡಿದರನ್ನು ಗುಂಡಿಟ್ಟು ಕೊಳ್ಳಬೇಕು. ಆಗ ಮಾತ್ರ ಕನ್ಹಯ್ಯ ಲಾಲ್ ಆತ್ಮಕ್ಕೆ ಶಾಂತಿ ಸಿಗುತ್ತದೆ. ಆತನನ್ನು ಹೇಗೆ ಕೊಲೆ ಮಾಡಿದ್ರೋ ಹಾಗೇ ಅವರನ್ನು ಕೊಲ್ಲಬೇಕು.

ಆಗ ಮಾತ್ರ ಮುಯ್ಯಿಗೆ ಮುಯ್ಯಿ ಆಗುತ್ತದೆ. ಹಿಂದೂಗಳ ಹತ್ಯೆ ಮಾಡಿದವರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. 

ಇದೇನು ಪಾಕಿಸ್ತಾನ ಅಂದುಕೊಂಡಿದ್ದಾರಾ? ನಮ್ಮ ದೇವಸ್ಥಾನಗಳಲ್ಲಿ ತೀರ್ಥ ಪ್ರಸಾದ ನೀಡುತ್ತಾರೆ. ಆದ್ರೆ ಕೆಲ ಮಸೀದಿಗಳಲ್ಲಿ ಶಸ್ತ್ರಾಸ್ತ್ರ ಇಟ್ಟಿದ್ದಾರೆ. ಮದರಸಾಗಳಲ್ಲಿ ಏನು ಬೋಧನೆ ಮಾಡುತ್ತಿದ್ದಾರೆ. ಭಾರತ ಮಾತೆ ಬಗ್ಗೆ ಮದರಸಗಳಲ್ಲಿ ಹೇಳಲ್ಲ. ಇಲ್ಲಿ ನಮಗೆ ಸಹನೆ ಅತಿಯಾಗಿ ಬೇಡ. ಸೇಡಿಗೆ ಸೇಡು ಎಂದು ನಾವು ನಿರ್ಧಾರ ಮಾಡಬೇಕು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ