ಉಕ್ರೇನ್‍ ಮೇಲೆ ಕ್ಷಿಪಣಿ ದಾಳಿ!

ಮಂಗಳವಾರ, 28 ಜೂನ್ 2022 (13:26 IST)
ಕೀವ್ : ರಷ್ಯಾದ ಕ್ಷಿಪಣಿ ದಾಳಿಯಿಂದ ಉಕ್ರೇನ್ನ 16 ಮಂದಿ ಸಾವನ್ನಪ್ಪಿದ್ದು, 59 ಮಂದಿ ಗಾಯಗೊಂಡಿರುವ ಘಟನೆ ಕ್ರೆಮೆನ್ಚುಕ್ನಲ್ಲಿರುವ ಶಾಪಿಂಗ್ ಮಾಲ್ನಲ್ಲಿ ನಡೆದಿದೆ.

ರಷ್ಯಾದ ವಿರುದ್ಧ ಕಿಡಿಕಾರಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಘಟನೆಯ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಮುಷ್ಕರವನ್ನು ಉದ್ದೇಶಪೂರ್ವಕವಾಗಿ ಜನನಿಬಿಡದ ಮಾಲ್ನಲ್ಲಿ ಮಾಡಲಾಗಿದೆ. ಇದರಿಂದಾಗಿ ಹೆಚ್ಚಿನ ಜನರು ಮೃತಪಟ್ಟಿದ್ದಾರೆ ಎಂದು ಗುಡುಗಿದರು.

ಕ್ಷಿಪಣಿ ದಾಳಿ ನಡೆದಾಗ ಸಾವಿರಕ್ಕೂ ಅಧಿಕ ಜನರು ಮಾಲ್ನಲ್ಲಿದ್ದರು. ಮಾಲ್ನಲ್ಲಿ ಬೆಂಕಿಯನ್ನು ನಂದಿಸಲು ಅನೇಕರು ಹರಸಾಹಸ ಪಡುತ್ತಿದ್ದಾರೆ. ಘಟನೆಯಲ್ಲಿ ಸಂತ್ರಸ್ತರ ಸಂಖ್ಯೆಯನ್ನು ಊಹಿಸಿಕೊಳ್ಳಲು ಅಸಾಧ್ಯ ಎಂದಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ