ಶಾಲಾರಂಭ: ವಿದ್ಯಾರ್ಥಿಗಳಿಗೆ ಸಿಎಂ ಬೊಮ್ಮಾಯಿಯಿಂದ ಬೆಸ್ಟ್ ಆಪ್ ಲಕ್

ಸೋಮವಾರ, 16 ಮೇ 2022 (11:10 IST)
ಬೆಂಗಳೂರು : ರಾಜ್ಯದಲ್ಲಿ ಸೋಮವಾರದಿಂದ ಎಲ್ಲಾ ಮಾದರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭವಾಗಲಿವೆ. ಈ ಮೂಲಕ 2 ವರ್ಷಗಳ ಬಳಿಕ ನಿಗದಿತ ಸಮಯಕ್ಕೆ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದು ಕೋವಿಡ್‌ ಪೂರ್ವ ಮಾದರಿಯ ಮಕ್ಕಳ ಕಲರವಕ್ಕೆ ಶಾಲೆಗಳು  ಸಾಕ್ಷಿಯಾಗಲಿವೆ.
 
ಇನ್ನು ಶಾಲೆ ಪ್ರಾರಂಭದ ಬಗ್ಗೆ ಮಾತನಾಡಿರುವ ಸಿಎಂ, ಬಹಳ ದಿನಗಳ ನಂತರ ಶಾಲೆ ಆರಂಭವಾಗ್ತಿದೆ. ಶಿಕ್ಷಣ ಇಲಾಖೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದೆ. ಎಲ್ಲಾ ಮಕ್ಕಳಿಗೂ ಶಾಲೆಗೆಗಳಿಗೆ ಪ್ರೀತಿಯಿಂದ ಸ್ವಾಗತ ಕೊರುತ್ತೇನೆ. ಮಕ್ಕಳಿಗೆ ಶಿಕ್ಷಣ ಬಹಳ ಮುಖ್ಯ. ಒಳ್ಳೆಯ ವಾತವಾರಣದ ಶಾಲೆಯಲ್ಲಿ ಕಲಿತಾಗ ಮಕ್ಕಳಿಗೆ ಒಳ್ಳೆಯ ಪರಿಣಾಮ ಆಗುತ್ತೆ.
 
 ಪುಸ್ತಕ,ಬಟ್ಟೆ, ಸೈಕಲ್ ಬೇಕಾದ ಎಲ್ಲವನ್ನು ಕೊಡುವ ಕೆಲಸ ಮಾಡ್ತೀವಿ. ಎರಡು ವರ್ಷ ಶಾಲೆ ಆರಂಭವಾಗುವುದೇ ಅನಿಶ್ಚಿತೆ ಇತ್ತು, ಸರಿಯಾಗಿ ಶಾಲೆಗಳು ನಡೆದಿರಲಿಲ್ಲ.  ಈಗ ಶಾಲೆಗಳು ಆರಂಭವಾಗ್ತಿದೆ ಮುಂಬರುವ ದಿನಗಳಲ್ಲಿ ಎಲ್ಲವನ್ನೂ ನೀಡಿ ಒಳ್ಳೆಯ ವಾತವಾರಣ ನಿರ್ಮಾಣ ಮಾಡ್ತೀವಿ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತುಮಕೂರಿನ ಎಂಪ್ರೆಸ್‌ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಮಧ್ಯಾಹ್ನ 12.30ಕ್ಕೆ ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ 2022-23ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ