ಸಮ ಸಮಾಜ ಬಸವಣ್ಣನವರ ಕನಸು: ಸಿಎಂ ಬೊಮ್ಮಾಯಿ

ಭಾನುವಾರ, 15 ಮೇ 2022 (15:40 IST)
ಧಾರವಾಡ : ಬಸವೇಶ್ವರರ ಕಂಚಿನ ಪುತ್ತಳಿ ನ್ನ ಅನಾವರಣ ಮಾಡಿದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬಸವೇಶ್ವರ ತತ್ವಗಳ ಬಗ್ಗೆ ಹಾಡಿ ಹೊಗಳಿದರು. ನರೇಂದ್ರ ಮೋದಿ ಅವರಿಗೆ ಹತ್ರ ಇರುವ ಸಚಿವ ಅಂದ್ರೆ ಪ್ರಹ್ಲಾದ್ ಜೋಶಿ, ಅದು ಎಲ್ಲರಿಗೂ ಗೊತ್ತಿದೆ. ಬಸವಣ್ಣಣ್ಣವರನ್ನ ನಾಶ ಮಾಡಬೇಕು ಎಂದು ಎಲ್ಲ ಶರಣರೂ ಬಿಟ್ಟು ಹೋಗಿದ್ದರು ಆದ್ರೆ ಕಲ್ಯಾಣ ಕ್ರಾಂತಿ ನಾಶ ಮಾಡಬೇಕು ಅಂತ ಇದ್ರು. ಆದರೆ ಕಲ್ಯಾಣ ಕ್ರಾಂತಿ ಎತ್ತರಕ್ಕೆ ಬೆಳೆದು ಹೊಯ್ತು.
 
ಸಮಾನ ವ್ಯವಸ್ಥೆಯನ್ನ ತರಬೇಕು ಎಂದು ಬಸವಣ್ಣನವರ ಪ್ರಯತ್ನ ಮಾಡಿದ್ದರು. ಬಸವಣ್ಣ ಅವರ ವಿಚಾರಗಳು ಪ್ರಸ್ತುತವಾಗಿವೆ. 900 ವರ್ಷ ಇತಿಹಾಸ ನೋಡಿದರೆ ನಾವು ಇನ್ನು ವಿಚಾರ ಮಾಡಬೇಕಿದೆ. ಅವರ ತತ್ವಗಳನ್ನ ಪಾಲನೆ ಮಾಡಬೇಕಿದೆ. ನಾವೂ ಇನ್ನು‌ ಬಸವಣ್ಣ ಅವರ ತತ್ವಗಳನ್ನ ಪಾಲನೆ ಮಾಡ್ತಾ ಇಲ್ಲ, ನಾವೂ ಆತ್ಮಾಲೋಕನೆ ಮಾಡಬೇಕು ಕಾಯಕ ಮತ್ತು ದಾಸೋಹದ ಮಾಡಬೇಕು ಎಂದು ಬಸವಣ್ಣನವರು ಹೇಳಿದ್ದರು ಎಂದು ತಿಳಿಸಿದರು.
 
ಶ್ರೀ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಬಸವೇಶ್ವರರ ಕಂಚಿನ ಪುತ್ಥಳಿಯನ್ನ‌ ಅನಾವರಣ ಮಾಡಿದರು. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾಥ್ ಕೋಟ್ಟಿದ್ದರು.
 
ಇನ್ನು ದೇವಸ್ಥಾ‌ನಲ್ಲಿ ವೇದಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾಮನ್ ಮ್ಯಾನ್ ಸಿಎಂ ಆಗಿದ್ದಾರೆ. ಹಿಂದೆ ಸಿಎಂಗಳು ಬಂದ್ರೆ ಜ‌ನರನ್ನ‌ಹತ್ತಿರ ಬಿಡ್ತಾ ಇರಲಿಲ್ಲಾ, ಸದ್ಯ ಬಸವರಾಜ ಬೊಮ್ಮಾಯಿ ಸಿಎಂ ಆದಾಗಿನಿಂದಲೂ ಜನರ ಹತ್ರ ಹೋಗ್ತಾ ಇದಾರೆ. ಅವರು ಕಾಮನ್ ಮ್ಯಾನ್ ಸಿಎ. ಆಗಿ ಕೆಲಸವನ್ನ ಮಾಡುತ್ತಿದ್ದಾರೆ ಎಂದ ಹಾಡಿಹೊಗಳಿದರು.
 
 ಧಾರವಾಡದ ಬಸವೇಶ್ವರರ ಕಂಚಿನ ಪುತ್ತಳಿಯನ್ನ ಅನಾವರ ಮಾಡಿರುವ ಸೌಭಾಗ್ಯ ನಮಗೆ ಸಿಕ್ಕಿದೆ. ದೇಶದಲ್ಲಿ ಪ್ರಧಾನಿ‌ ಮೋದಿ ಅವರು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಜಗತ್ತಿನಲ್ಲಿ ಬಿಜೆಪಿ ಸರಕಾರವೂ ಒಳ್ಳೆಯ ಕೆಲಸವನ್ನ ಮಾಡುತ್ತಿದೆ. ಬೇರೆ ಬೇರೆ ದೇಶಗಳು ಭಾರತ ದೇಶವನ್ನ ಹೊಗಳುತ್ತಿದೆ. ಉಕ್ರೆನ್ ನಿಂದ 21, ಸಾವಿರ ವಿದ್ಯಾರ್ಥಿಗಳನ್ನ ಸುರಕ್ಷಿತ ವಾಗಿ ತರುವುದರಲ್ಲಿ ಮೋದಿ ಸರಕಾರ ಕೆಲಸ ಮಾಡುತ್ತಿದೆ ಎಂದರು.
 
ಇನ್ನು 2023 ರೊಳಗೆ ರಾಜ್ಯದಲ್ಲಿ ಡಬಲ್ ಲೈನ್ ರೆಲ್ವೆ ಲೈನನ್ನ ಪೂರ್ಣ ಗೊಳಿಸುತ್ತೆವೆ, ಧಾರವಾಡ ಮತ್ತು ಬೆಂಗಳೂರು ಮಧ್ಯ ವಂದೇ ಮಾತರಂ ಟ್ರೆನ್ಮ ಆರಂಭ ಮಾಡುತ್ತೆವೆ,. ರಾಜ್ಯದ ಅಭಿವೃದ್ಧಿ  ಮಾಡುತ್ತೆವೆ ದೇಶದ ಆದ್ಯಾತ್ಮಕ ಕೆಲಸದ ಜೊತೆಗೆ ಅಭಿವೃದ್ಧಿ ಗಳಿಗಾಗಿ ಕೇಂದ್ರ, ರಾಜ್ಯ ಸರಕಾರ ಶ್ರಮ ಪಡುತ್ತೆವೆ  ನಾವೆಲ್ಲ ಕಾಮನ್ ಮ್ಯಾನ್ ಸಿಎಂಗೆ ಸಾಥ್ ಕೊಡಬೇಕು ಎಂದು ಸಚಿವ ಪ್ರಹ್ಲಾದ್ ಜೋಶಿ ವೇದಿಕೆಯ ಸಭೆಯನ್ನುದ್ದೆಶಿಸಿ ಮಾತನಾಡಿದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ