ಮೂರು ದಿನ ರಜೆ ಮೇಲೆ ಸುಬಾಷ್ ಬಿ ಅಡಿ: ಲೋಕಾಯುಕ್ತ ಅರ್ಚಕರಿಲ್ಲದ ಗುಡಿ

ಮಂಗಳವಾರ, 1 ಡಿಸೆಂಬರ್ 2015 (17:24 IST)
ಉಪಲೋಕಾಯುಕ್ತ ಸುಭಾಷ್ ಬಿ ಅಡಿ ಅವರ ಪದಚ್ಯುತಿಗೆ ಕಾಂಗ್ರೆಸ್ ಗೊತ್ತುವಳಿ ಮಂಡನೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಸುಬಾಷ್ ಮೂರು ದಿನಗಳ ರಜೆ ಮೇಲೆ ತೆರಳಿದ್ದಾರೆ. ಉಪಲೋಕಾಯುಕ್ತರಾಗಿದ್ದ ಮಜಗೆ ಕೂಡ ರಾಜೀನಾಮೆ ನೀಡಿದ್ದರು. ಲೋಕಾಯುಕ್ತ ಭಾಸ್ಕರರಾವ್ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದ ಮೇಲೆ ಅವರು ರಜೆ ಮೇಲೆ ತೆರಳಿದ್ದರು.

ಈ ಹಿನ್ನೆಲೆಯಲ್ಲಿ ಲೋಕಾಯುಕ್ತವು ಒಂದು ರೀತಿಯಲ್ಲಿ ಅರ್ಚಕರಿಲ್ಲದ ಗುಡಿಯಾಗಿದೆ. ಕಾಗೋಡು ತಿಮ್ಮಪ್ಪ ಅವರು ಲೋಕಾಯುಕ್ತ, ಉಪಲೋಕಾಯುಕ್ತರ ಪ್ರಸ್ತಾವನೆಗಳನ್ನು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗೆ ಸಲ್ಲಿಸಿದ ಬಳಿಕ ಲೋಕಾಯುಕ್ತ ಸಂಸ್ಥೆ ದಿಕ್ಕಿಲ್ಲದೇ ಅನಾಥ ಸ್ಥಿತಿಗೆ ತಲುಪಿದೆ.  ಬಿಜೆಪಿ ಅವಧಿಯಲ್ಲಿ ನೇಮಕವಾಗಿರುವ ಜಗದೀಶ್ ಶೆಟ್ಟರ್ ಅವರಿಗೆ ಆಪ್ತರಾಗಿರುವ ಸುಭಾಷ್ ಅಡಿ ಅವರು ಅಧಿಕಾರದಲ್ಲಿ ಮುಂದುವರಿದರೆ ಅಪಾಯ ಎಂಬ ಆತಂಕವೇ ಇವರ ನಡೆಗೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ.

 ಆದರೆ ಲೋಕಾಯುಕ್ತರ ಪದಚ್ಯುತಿಗೆ ಒಕ್ಕೊರಲ ಬೆಂಬಲ ಸಿಕ್ಕಿದ್ದರೂ ಉಪಲೋಕಾಯುಕ್ತರ ಪದಚ್ಯುತಿಗೆ ತೀವ್ರ ವಿರೋಧ ಕೇಳಿಬಂದಿತ್ತು. ಬಿಜೆಪಿಯ ಜಗದೀಶ್ ಶೆಟ್ಟರ್ ಲೋಕಾಯುಕ್ತ ಸಂಸ್ಥೆಯನ್ನು ಸರ್ಕಾರ ಮುಚ್ಚಲು ಹೊರಟಿದೆ ಎಂದು ಆರೋಪಿಸಿದ್ದರು.  ಮಾಜಿ ಅಡ್ವೊಕೇಟ್ ಜನರಲ್‌ಗಳು ಮತ್ತು ಹಿರಿಯ ನ್ಯಾಯವಾದಿಗಳು ಈ ಕ್ರಮವನ್ನು ವಿರೋಧಿಸಿದ್ದರು. 

ವೆಬ್ದುನಿಯಾವನ್ನು ಓದಿ