ದೀಪಾವಳಿ ವೇಳೆ ಪಟಾಕಿ ಕಣ್ಣಿಗೆ ಬಿದ್ದರೆ ಇದೊಂದು ತಪ್ಪು ಮಾಡಬೇಡಿ

Krishnaveni K

ಸೋಮವಾರ, 6 ಅಕ್ಟೋಬರ್ 2025 (12:28 IST)
ಇನ್ನೇನು ದೀಪಾವಳಿ ಹತ್ತಿರ ಬರುತ್ತಿದ್ದು, ಪಟಾಕಿಯಿಂದ ದುರಂತಗಳಾಗುವುದೂ ಸಾಮಾನ್ಯವಾಗಿ ಬಿಟ್ಟಿದೆ. ಕಣ್ಣಿಗೆ ಪಟಾಕಿ ಬಿದ್ದರೆ ತಕ್ಷಣ ನೀವು ಇದೊಂದು ತಪ್ಪು ಮಾಡಬಾರದು. ಅದೇನು ಇಲ್ಲಿದೆ ನೋಡಿ ಟಿಪ್ಸ್.

ದೀಪಾವಳಿ ವೇಳೆ ಎಷ್ಟೋ ಜನ ಕಣ್ಣಿಗೆ ಪಟಾಕಿಯಿಂದ ಗಾಯ ಮಾಡಿಕೊಳ್ಳುತ್ತಾರೆ. ಕೆಲವರಲ್ಲಿ ಇದು ಗಂಭೀರವಾಗಿ ಶಾಶ್ವತವಾಗಿ ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಹಂತಕ್ಕೆ ತಲುಪಿರುತ್ತದೆ. ಹೀಗಾಗಿ ಪಟಾಕಿ ಸಿಡಿಸುವಾಗ ಎಚ್ಚರಿಕೆಯಿಂದಿರಬೇಕು.

ಹಾಗಿದ್ದರೂ ಪಟಾಕಿ ಸಿಡಿದು ಕಣ್ಣಿಗೆ ಗಾಯವಾದರೆ ತಕ್ಷಣಕ್ಕೆ ಕಣ್ಣುಗಳನ್ನು ಉಜ್ಜಬೇಡಿ. ಇದರಿಂದ ಕೆಮಿಕಲ್ ಕಣ್ಣಿನೊಳಗೆ ಸಿಲುಕಿದ್ದರೆ ಅದು ಮತ್ತಷ್ಟು ಗಾಯ ಮಾಡುವ ಅಪಾಯವಿರುತ್ತದೆ. ಅದೇ ರೀತಿ ಐಸ್ ಪ್ಯಾಕ್ ಇಟ್ಟು ಒತ್ತಡ ಹಾಕಬೇಡಿ. ಇದೂ ಕೂಡಾ ಕಣ್ಣಿಗೆ ಮತ್ತಷ್ಟು ಹಾನಿ ಮಾಡಬಹುದು.

ನೀವು ಮಾಡಬಹುದಾದ ಬೆಸ್ಟ್ ಕೆಲಸವೆಂದರೆ ಕಣ್ಣುಗಳನ್ನು ಯಾವುದೇ ಕಾರಣಕ್ಕೂ ಸ್ಪರ್ಶಿಸದಂತೆ ಎಚ್ಚರಿಕೆ ವಹಿಸಿ. ಸ್ವಯಂ ವೈದ್ಯಕೀಯ ಚಿಕಿತ್ಸೆ ಮಾಡದೇ ತಕ್ಷಣ ನೇತ್ರ ತಜ್ಞರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಿ. ಇದರಿಂದ ಕಣ್ಣಿಗೆ ಹಾನಿಯಾಗುವುದು ತಪ್ಪುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ