ಸತ್ಮೇಲೆ ದೇಹ ಏಷ್ಟೆಷ್ಟ ದಿನಕ್ಕೆ ಏನೇನ್ ಆಗತ್ತೆ..ಗೊತ್ತಾ.?

ಮಂಗಳವಾರ, 27 ಡಿಸೆಂಬರ್ 2016 (15:59 IST)
ಪ್ರಕೃತಿ ಎದುರು ಮನುಷ್ಯ ಏನೂ ಅಲ್ಲ. ದಾಸವರೇಣ್ಯರು ಹೇಳಿದಂತೆ ತೃಣಕ್ಕೆ ಸಮಾನ, ಹುಲು ಮಾನವ ಎನ್ನುವುದು ಹೆಜ್ಜೆ ಹೆಜ್ಜೆಗೂ ಸಾಬೀತಾಗುತ್ತಿದೆ. ಅದು ದೇಹದಲ್ಲಿ ಉಸಿರಿರುವಾಗಿನ ಮಾತು. ಆದರೆ, ಉಸಿರು ಹೋದ ನಂತರವೂ ದೇಹದ ಕಥೆ.. ವ್ಯಥೆ ಕುತೂಹಲವೇ. ಸತ್ತ ನಂತರ ಮನುಷ್ಯನ ದೇಹ ಎಷ್ಟೆಷ್ಟು ದಿನಕ್ಕೆ ಏನೇನು ಆಗುತ್ತದೆ ಎನ್ನುವ ಕುರಿತು ಒಂದಿಷ್ಟು ವೈಜ್ಞಾನಿಕ ಮಾಹಿತಿ ಇಲ್ಲಿದೆ.
 
1. ಮನುಷ್ಯ ಮರಣ ಹೊಂದಿದ ಕೇವಲ 36 ಗಂಟೆಗಳಲ್ಲಿ ನೊಣಗಳು ದೇಹದಲ್ಲಿ ಮೊಟ್ಟೆಯಿಡುತ್ತವೆ.
 
2. 60 ಗಂಟೆಗಳಲ್ಲಿ ಲಾವಾಗಳು ನಿರ್ಜೀವ ದೇಹದಲ್ಲಿ ಉತ್ಪತ್ತಿಯಾಗುತ್ತವೆ.
 
3. ಮೂರು ದಿನಗಳಲ್ಲಿ ಕೈ ಹಾಗೂ ಕಾಲಿನ ಉಗುರುಗಳು ಸಂಪೂರ್ಣವಾಗಿ ಉದುರಿ ಬೀಳುತ್ತವೆ.
 
4. ನಾಲ್ಕು ದಿನಗಳಲ್ಲಿ ತಲೆ ಹಾಗೂ  ದೇಹದ ಎಲ್ಲಾ ಭಾಗದ ಕೂದಲು ಉದುರಿ ಬೀಳುತ್ತವೆ.
 
5. ಐದು ದಿನಗಳಲ್ಲಿ ಮೆದುಳು ದ್ರವವಾಗಿ ಕರಗುತ್ತದೆ.
 
6. ಆರು ದಿನದೊಳಗೆ ಹೊಟ್ಟೆಯಲ್ಲಿ ವಾಯು ತುಂಬಿಕೊಂಡು ಒಡೆದುಹೋಗುತ್ತದೆ.
 
7. ಕೇವಲ 60 ದಿನಗಳಲ್ಲಿ ದೇಹ ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಕರಗಿ ದ್ರವರೂಪ ತಾಳುತ್ತದೆ

 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ