RSS ದೇಶದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದೆ, ಇದು ಭಾರತದ ತಾಲಿಬಾನ್: ಬಿಕೆ ಹರಿಪ್ರಸಾದ್

Krishnaveni K

ಭಾನುವಾರ, 17 ಆಗಸ್ಟ್ 2025 (17:18 IST)
ಬೆಂಗಳೂರು: ಆರ್ ಎಸ್ಎಸ್ ಸಂಘಟನೆಯನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆರ್ ಎಸ್ಎಸ್ ಸಂಘಟನೆ ಭಾರತದ ತಾಲಿಬಾನ್ ಎಂದಿದ್ದಾರೆ.

ಮೊನ್ನೆಯಷ್ಟೇ ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಆರ್ ಎಸ್ಎಸ್ ಸಂಘಟನೆಯನ್ನು ಹೊಗಳಿದ್ದರು. ಇದನ್ನು ಸಿಎಂ ಸಿದ್ದರಾಮಯ್ಯ ಖಂಡಿಸಿದ್ದರು. ಇದರ ಬೆನ್ನಲ್ಲೇ ಈಗ ಬಿಕೆ ಹರಿಪ್ರಸಾದ್ ಕೂಡಾ ಕಿಡಿ ಕಾರಿದ್ದಾರೆ.

ಆರ್ ಎಸ್ಎಸ್ ಸಂಘಟನೆ ದೇಶದಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತದೆ. ಹೀಗಾಗಿ ಅದನ್ನು ನಾನು ಭಾರತದ ತಾಲಿಬಾನ್ ಎನ್ನುತ್ತೇನೆ. ಭಾರತೀಯ ತಾಲಿಬಾನ್ ನನ್ನು ಪ್ರಧಾನಿ ಮೋದಿ ಕೆಂಪುಕೋಟೆಯಲ್ಲಿ ಶ್ಲಾಘಿಸುತ್ತಾರೆ ಎಂದಿದ್ದಾರೆ. ಅವರ ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ.

ಸ್ವಾತಂತ್ರ್ಯ ಹೋರಾಟದಲ್ಲಿ ಆರ್ ಎಸ್ಎಸ್ ಭಾಗಿಯಾಗಲೇ ಇಲ್ಲ. ಅದು ನೋಂದಣಿಯಾದ ಸಂಸ್ಥೆಯೇ ಅಲ್ಲ. ಹಾಗಿದ್ದರೂ ದೊಡ್ಡ ಸಂಘಟನೆ ಎಂದು ಬಿಂಬಿಸಿಕೊಳ್ಳುತ್ತದೆ. ಹಾಗಿದ್ದರೆ ಇವರಿಗೆ ದುಡ್ಡ ಎಲ್ಲಿಂದ ಬರುತ್ತದೆ. ದೇಶ ವಿಭಜನೆ ಮಾಡಲು ಜಿನ್ನಾ ಮತ್ತು ಮೌಂಟ್ ಬ್ಯಾಟನ್ ಕಾರಣ ಎಂದು ಎನ್ ಸಿಆರ್ ಟಿ ಪಠ್ಯ ಪುಸ್ತಕದಲ್ಲಿ ನೀಡಲಾಗಿದೆ. ಬಿಜೆಪಿಯವರು ಇತಿಹಾಸ ತಿರುಚುವ ಮಾಸ್ಟರ್ಸ್. ದೇಶ ವಿಭಜನೆ ಪ್ರಸ್ತಾಪ ಮೊದಲು ಇಟ್ಟಿದ್ದೇ ಫಜ್ಲುಲ್ ಹಕ್ ಮತ್ತು ಶ್ಯಾಮ್ ಪ್ರಸಾದ್ ಮುಖರ್ಜಿ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ