ಜಗತ್ತಿನ ಅಂತ್ಯದ ಕುರಿತು ಹಿಂದೂ ಧರ್ಮಗ್ರಂಥಗಳಲ್ಲಿ ಹಲವು ಅಭಿಪ್ರಾಯಗಳಿವೆ. ಹಲವು ಹಿಂದೂ ಪುರಾಣಗಳ ಪ್ರಕಾರ ಹಿಮಾಲಯದ ಗುಹೆಯೊಂದರಲ್ಲಿರುವ 6 ಇಂಚಿನ ಪುಟ್ಟ ಶಿವಲಿಂಗವೇ ವಿಶ್ವವನ್ನು ನಾಶಗೊಳಿಸಲಿದೆಯಂತೆ. ದಿನೇದಿನೇ ಬೆಳೆಯುತ್ತಿರುವ ಈ ಶಿವಲಿಂಗ ಚಾವಣಿಯನ್ನು ಮುಟ್ಟುವಂತಹ ಎತ್ತರಕ್ಕೆ ಬೆಳೆದಾಗ ವಿಶ್ವದ ಕೊನೆಯಾಗುತ್ತದೆಯಂತೆ. ಸ್ಕಂದ ಪುರಾಣದಲ್ಲಿ ಈ ರೀತಿಯಲ್ಲಿ ಹೇಳಲಾಗಿದೆ.