ಈ ಎಲ್ಲಾ ಆರೋಗ್ಯ ಸಮಸ್ಯೆ ಇರುವವರು ಈರುಳ್ಳಿ ತಿನ್ನಬಾರದು

Krishnaveni K

ಶುಕ್ರವಾರ, 26 ಸೆಪ್ಟಂಬರ್ 2025 (10:50 IST)
ಈರುಳ್ಳಿ ಆರೋಗ್ಯಕ್ಕೆ ಉತ್ತಮವೇನೋ ಹೌದು. ಆದರೆ ಕೆಲವೊಂದು ತರಕಾರಿಗಳು ಕೆಲವೊಂದು ರೋಗಗಳಿಗೆ ನಿಷಿದ್ಧ. ಅದೇ ರೀತಿ ಈರುಳ್ಳಿ ಕೂಡಾ ಈ ಕೆಲವೊಂದು ಆರೋಗ್ಯ ಸಮಸ್ಯೆ ಇರುವವರು ಸೇವನೆ ಮಾಡಬಾರದು.

ಹೊಟ್ಟೆ ಸಮಸ್ಯೆ ಇರುವವರು
ಅಜೀರ್ಣ ಸಮಸ್ಯೆ ಇರುವವರು ಈರುಳ್ಳಿ ತಿನ್ನಬಾರದು. ಈರುಳ್ಳಿ ಜೀರ್ಣಕ್ರಿಯೆಗೆ ಕಷ್ಟ. ಹೀಗಾಗಿ ಗ್ಯಾಸ್, ಕೆಳಹೊಟ್ಟೆ ನೋವು, ಹೊಟ್ಟೆ ನೋವು ಅಥವಾ ಸೆಳೆತ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗಬಹುದು.

ಎದೆ ಉರಿ
ವಿಶೇಷವಾಗಿ ಹಸಿ ಈರುಳ್ಳಿ ತಿನ್ನುವುದರಿಂದ ಎದೆ ಉರಿ ಸಮಸ್ಯೆಯಾಗಬಹುದು. ಪದೇ ಪದೇ ಎದೆ ಉರಿ ಸಮಸ್ಯೆ ಅನುಭವಿಸುತ್ತಿದ್ದರೆ ಹಸಿ ಈರುಳ್ಳಿ ಸೇವನೆ ಅವಾಯ್ಡ್ ಮಾಡುವುದು ಉತ್ತಮ.

ಆಹಾರದ ಸೆನ್ಸಿಟಿವಿಟಿ
ಕೆಲವರಿಗೆ ಕೆಲವೊಂದು ಆಹಾರ ಸೇವನೆಯಿಂದ ಅಲರ್ಜಿ, ಅಸಿಡಿಟಿ, ಹೊಟ್ಟೆ ತೊಳೆಸಿದಂತಾಗುವುದು, ತಲೆಸುತ್ತಿದಂತಾಗುವುದು ಮುಂತಾದ ಸಮಸ್ಯೆ ಬರಬಹುದು. ಅಂತಹವರು ಈರುಳ್ಳಿ ಅವಾಯ್ಡ್ ಮಾಡುವುದು ಉತ್ತಮ.

ಈರುಳ್ಳಿ ಅಲರ್ಜಿ
ಅಪರೂಪದ ಪ್ರಕರಣಗಳಲ್ಲಿ ಕೆಲವರಿಗೆ ಈರುಳ್ಳಿಯೇ ಅಲರ್ಜಿ ಉಂಟುಮಾಡುತ್ತದೆ. ಚರ್ಮದ ಅಲರ್ಜಿ, ತುರಿಕೆ, ಕಣ್ಣಿನಲ್ಲಿ ನೀರು, ಗಂಟಲು ಕೆರೆತ ಉಂಟಾಗುವ ಸಾಧ್ಯತೆಯಿದೆ.

ಈ ಔಷಧಿ ತೆಗೆದುಕೊಳ್ಳುವವರು ಸೇವಿಸಬಾರದು
ಇದಲ್ಲದೆ, ಕೆಲವೊಂದು ಸಂದರ್ಭದಲ್ಲಿ ರಕ್ತ ತೆಳುವಾಗಲು ಔಷಧಿ ತೆಗೆದುಕೊಳ್ಳುತ್ತಿರುವವರು, ಆಂಟಿ ಪ್ಲೇಟ್ ಲೆಟ್ ಔಷಧಿಗಳು, ಮಧುಮೇಹ ಕಡಿಮೆ ಮಾಡಲು ಔಷಧಿ ಸೇವನೆ ಮಾಡುತ್ತಿರುವವರಿಗೆ ಇದು ಅಡ್ಡಪರಿಣಾಮ ಉಂಟುಮಾಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ